ಮಂಜುನಾಥ ಶೆಟ್ಟಿ…

ಕೇಂದ್ರದ ಬಿಜೆಪಿ ಸರ್ಕಾರವು ದೇಶದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ದುರುದ್ದೇಶದಿಂದಲೇ ಜಾರಿಗೆ ತಂದಿದೆ. ಆದರೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳುವಂತೆ ಮಾಡುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕರೆ ನೀಡಿದೆ.

ಮಾಜಿ ಸಚಿವ ಮಧು ಬಂಗಾರಪ್ಪ ಮಾತನಾಡಿ ದೇಶದ ಪ್ರತಿಯೊಬ್ಬ ಪ್ರಜೆಯು ಇಲ್ಲಿ ಮತದಾನದ ಹಕ್ಕು ಪಡೆದಿರುವುದು ಬಿಜೆಪಿ ಸರ್ಕಾರದಿಂದ ಅಲ್ಲ. ಅದು ಸಿಕ್ಕಿದ್ದು ಸಂವಿಧಾನದ ಮೂಲಕ ಹಾಗಾಗಿ ನಮಗೆ ಸಂವಿಧಾನವೇ ದೇವರು. ಆ ಮೂಲಕ ವೇ ನಾವು ನಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಾಗಿದೆ. ಕೇಂದ್ರದ ಬಿಜೆಪಿ ಸರಕಾರದ ದುರುದ್ದೇಶವನ್ನು ಆ ಮೂಲಕವೇ ತಡೆಯ ಬೇಕಾಗಿದೆ ಎಂದರು.

ನಾಳೆಯಿಂದಲೇ ನಾವು ನಮ್ಮ ಕರ್ತವ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕಾಗಿದೆ. ಸಂವಿಧಾನ ಪ್ರಕಾರ ನಾವು ಏನು ಮಾಡಬೇಕು ಅದನ್ನು ಮಾಡೋಣ ಎಲ್ಲದಕ್ಕೂ ಉತ್ತರ ಇರುತ್ತದೆ. ನಿವಾಸಿ ದೃಢೀಕರಣ ಸಮಸ್ಯೆ ಇದ್ದಲ್ಲಿ ನಾವೇ ಮುಂದೆ ನಿಂತು ಮಾಡಿಸಿ ಒಟ್ಟಾರೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇರುವಂತೆ ನೋಡಿಕೊಳ್ಳೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಸದಸ್ಯರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *