ಮಂಜುನಾಥ ಶೆಟ್ಟಿ…

ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಬೇಕು ಈ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಭದ್ರಗೊಳಿಸಬೇಕು ಮತ್ತು ರೈತರು ಕೂಡ ಮಣ್ಣಿನ ಫಲವತ್ತತೆ ಉಳಿಸಬೇಕಾದರೆ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕು ಹಾಲಿನಂತೆ ಕೊಟ್ಟಿಗೆ ಗೊಬ್ಬರ ಕೂಡ ಲಾಭದಾಯಕ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ತಿಳಿಸಿದರು.


ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಬೆಂಗಳೂರು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಸಹಕಾರ ಇಲಾಖೆ ಶಿವಮೊಗ್ಗ ಸಚಿವಲಯ ಸ್ಥಾಪನೆಯ 5 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಜುಲೈ ರವರೆಗೆ ನಡೆಯುತ್ತಿರುವ ಸಹಕಾರ ಸಪ್ತಾಹ ಆಚರಣೆಯಲ್ಲಿ ತಾಲೂಕಿನ ಹಾಲು ಉತ್ಪಾದಕರು ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತು ಹಾಲು ಪರೀಕ್ಷೆಕರುಗಳಿಗೆ ಹಾಗೂ ಕೃತಕ ಗರ್ಭಧಾರಣ ಕಾರ್ಯಕರ್ತರುಗಳಿಗೆ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.


ಶಿಮೂಲ ಅಧ್ಯಕ್ಷ ವಿದ್ಯಾಧರ್ ಮಾತನಾಡಿ ಪ್ರತಿನಿತ್ಯ 4.5 ಲಕ್ಷ ಲೀಟರ್ ಹಾಲು ನಮ್ಮ ದಿನ ನಿತ್ಯದ ಬಳಕೆಗೆ ಸಾಕು.ಆದರೆ 9.5 ಲಕ್ಷ ಲೀಟರ್ ಆರ್ ಎಂ ಮಂಜುನಾಥ್ ಗೌಡರು ಕೆಎಂಎಫ್ ನಿರ್ದೇಶಕರಾದ ಮೇಲೆ ಅವರ ಪ್ರಯತ್ನದಿಂದ ಹೊರ ಜಿಲ್ಲೆಗೆ ಹೋಗುತ್ತಿದೆ ಉಳಿದ 2.5 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಗೆ ಬಳಸಲಾಗುತ್ತಿದೆ ಎಂದರು.ಸುಮಲದಿಂದ ಹಾಲು ಉತ್ಪಾದಕರ ಸಂಘದ ಕಟ್ಟಡಗಳಿಗೆ ಈಗ ಒಂಬತ್ತು ಲಕ್ಷದವರೆಗೆ ನೀಡುತ್ತಿದ್ದೇವೆ. ನಿರುತರದಾಗ ಸದಸ್ಯರಿಗೆ 3 ಲಕ್ಷ ಗಳನ್ನು ಕೊಡುತ್ತಿದ್ದೇವೆ.40 ಸಾವಿರ ರಬ್ಬರ್ ಮ್ಯಾಟ್ ಗಳನ್ನು ನೀಡುತ್ತಿದ್ದೇವೆ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *