ಮಂಜುನಾಥ ಶೆಟ್ಟಿ…

ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಮತ್ತು ಶಿವಮೊಗ್ಗ ಸಂಚಾರಿ ವ್ರತ್ತ ಸಿಪಿಐ ದೇವರಾಜ್ ನೇತೃತ್ವದಲ್ಲಿ ನಗರದಲ್ಲಿ ಕೇವಲ ಎಂಟು ಗಂಟೆಗಳಲ್ಲಿ ಡಿಫೆಕ್ಟಿವ್ ಮತ್ತು ನಂಬರ್ ಪ್ಲೇಟ್ ಇಲ್ಲದ 74 ವಾಹನಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿ ಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಇನ್ನು ಮುಂದೆ ಈ ರೀತಿಯ ನಡವಳಿಗಳಿಗೆ ಅವಕಾಶವಿಲ್ಲ ನಂಬರ್ ಪ್ಲೇಟ್ ಇಲ್ಲದ ಮತ್ತು ಡಿಫೆಕ್ಟಿವ್ ವಾಹನಗಳನ್ನು ಕಾನೂನು ಬಾಹಿರ ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸುವ ಸಂಭವವಿದ್ದು ಯಾವುದೇ ಕಾರಣಕ್ಕೂ ಯಾರಿಗೂ ಕೂಡ ರಿಯಾಯಿತಿ ನೀಡುವುದಿಲ್ಲ ಮತ್ತು ಇನ್ನು ಮುಂದೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬರುವ ದಿನಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳುತ್ತೇವೆ ಕೇಂದ್ರ ಮೋಟಾರ್ ವಾಹನ ಕಾಯ್ದೆಯ ಅನ್ವಯ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *