ಮಂಜುನಾಥ ಶೆಟ್ಟಿ…

ಶಿವಮೊಗ್ಗದ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ವೈದ್ಯರಾದ ಶ್ರೀ ಶಂಶಾಕ ಆರೂರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವೈದ್ಯೋ ಹರಿ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭಕೆ ವಿಧಾನ ಪರಿಷತ್ ಶಾಸಕರಾದ ಡಿಎಸ್ ಅರುಣ್ ಚಾಲನೆ ನೀಡಿದರು.

ಕ್ಯಾಮೆರಾಗೆ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.ವೈದ್ಯಕೀಯ ಕ್ಷೇತ್ರದ ಮಹತ್ವ ಹಾಗೂ ಸಮಾಜಮುಖಿ ಸಂದೇಶವನ್ನು ಒಳಗೊಂಡಿರುವ ಈ ಚಿತ್ರವು ಉತ್ತಮ ಯಶಸ್ಸು ಕಾಣಲಿ ಎಂದು ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಖ್ಯಾತ ನರರೋಗ ತಜ್ಞರಾದ ಡಾ. ಶಿವರಾಮಕೃಷ್ಣ, ಡಾ.ನಾರಾಯಣ ಪಂಜಿ ಸೇರಿದಂತೆ ಚಿತ್ರತಂಡದ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *