
ಮಂಜುನಾಥ ಶೆಟ್ಟಿ…
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಬಂಟರ ಸಂಘ ಶಿವಮೊಗ್ಗ ಮತ್ತು ಬೆನಕ ಇವೆಂಟ್ಸ್ ಕುಂದಾಪುರ ಇವರ ಸಹಯೋಗದಲ್ಲಿ ಮೂರು ದಿನಗಳ ಕಾಲ ಹಲಸು ಮತ್ತು ಮಾವು ಮೇಳ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಡಾ ಸತೀಶ್ ಕುಮಾರ್ ಶೆಟ್ಟಿ ಹೇಳಿದರು.
ನಗರದ ಗೋಪಾಲ ಗೌಡ ಬಡಾವಣೆಯಲ್ಲಿರುವ ಶಿವಮೊಗ್ಗ ಬಂಟರ ಭವನದಲ್ಲಿ ಜುಲೈ 3 , 4 ಮತ್ತು 5 ಶುಕ್ರವಾರ ಶನಿವಾರ ಮತ್ತು ಭಾನುವಾರದಂದು ವಿಶೇಷ ಹಲಸು ಮತ್ತು ಮಾವು ಮೇಳ ನಡೆಯಲಿದೆ.
ಮೇಳದಲ್ಲಿ ಸುಮಾರು 90 ರಿಂದ 100 ವಿವಿಧ ಬಗೆಯ ಸ್ಟಾಲ್ ಗಳು ಇರುತ್ತದೆ.
ಹಲವಾರು ತಿನುಸುಗಳು ಹಣ್ಣಿನ ಬಗೆ ಬಗೆಯ ಐಸ್ ಕ್ರೀಮ್ ಗಳು ಹಲಸಿನ ಹೋಳಿಗೆ ವಿವಿಧ ಹಣ್ಣುಗಳು ತರಕಾರಿ ಬೀಜಗಳು ಹಣ್ಣಿನ ಉತ್ಪನ್ನಗಳು ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು ವಿವಿಧ ಸ್ಥಳೀಯ ಹಣ್ಣಿನ ಹೂವಿನ ಹಸಿ ಗಿಡಗಳು ಮತ್ತು ಮುಂತಾದ ವಸ್ತುಗಳು ಮೇಳದಲ್ಲಿ ಸಿಗುತ್ತದೆ.
ವಿಶೇಷ ಆಕರ್ಷಣೆ…
ಹಲಸಿನ ಹಣ್ಣಿನ ಜಾಮ್ ಮತ್ತು ಹಲಸಿನ ಹಣ್ಣಿನ ಉಪ್ಪಿನಕಾಯಿ
ಮಾವಿನ ಹಣ್ಣಿನ ಜಾಮ್ ಮತ್ತು ಹಲಸಿನ ಬೀಜದ ಬಿಸ್ಕೆಟ್.
ಮೇಳದ ಮೆರಗನ್ನು ಹೆಚ್ಚಿಸಲು ರಾಜ್ಯದ ವಿವಿಧ ಭಾಗದಿಂದ ಉತ್ಪನ್ನಗಳ ಹಾಗೂ ವಿಶೇಷ ಮಾರಾಟಗಾರರು ಆಗಮಿಸಲಿದ್ದಾರೆ.
ಶಿವಮೊಗ್ಗ ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಪಾಲ್ಗೊಂಡು ಮೇಳವನ್ನು ಯಶಸ್ವಿಗೊಳಿಸಕೊಡಬೇಕಾಗಿ ಆಯೋಜಕರಾದ ಬೆನಕ ಇವೆಂಟ್ಸ್ ಕುಂದಾಪುರ ರವರು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬೆನಕ ಇವೆಂಟ್ಸ್ ಮುಖ್ಯಸ್ಥರಾದ ಗಣೇಶ ಶೆಟ್ಟಿ ಬಸವರಾಜ್ ವಸಂತ್ ಹೋಬಳಿದಾರ್ ಜಯಶೀಲ ಶೆಟ್ಟಿ ಸಂದೇಶ್ ಪುತ್ರನ್ ಭಾಸ್ಕರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಪ್ರವೇಶ ಉಚಿತ…
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8105279767
ಭಾಸ್ಕರ್ ಪೂಜಾರಿ…
