ಮಂಜುನಾಥ ಶೆಟ್ಟಿ…

ಸುದೀರ್ಘ ಸಾರ್ವಜನಿಕ ಸೇವೆಯಿಂದ ವಯೋ ನಿವೃತ್ತಿ ಹೊಂದುತ್ತಿರುವ ಶ್ರೀಮತಿ ಡಾ.ಗೀತಾ ಎಂ ಜಿಲ್ಲಾ ಶಸ್ತ್ರಚಿಕಿತ್ಸಕರು, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಸಿಮ್ಸ್‌-ಶಿವಮೊಗ್ಗ ಇವರಿಗೆ ಬೀಳ್ಕೊಟ್ಟು ಅಭಿನಂದಿಸಿದರು.

ಶಿವಮೊಗ್ಗ ಇವರು ಶ್ರೀಯುತ ಮೀಠಾನಾಯ್ಕ ಹಾಗೂ ಶ್ರೀಮತಿ ಶಾರದಾಬಾಯಿ ಇವರ ಮಗಳಾಗಿ ಬೆಂಗಳೂರು ನಗರದಲ್ಲಿ ಜನಿಸಿದ್ದು, ಬೆಂಗಳೂರು ನಗರದಲ್ಲಿ ಸಂಪೂರ್ಣ ವಿದ್ಯಾಬ್ಯಾಸ ಮುಗಿಸಿ ವೈದ್ಯ ವೃತ್ತಿಯನ್ನು ತಮ್ಮ ಸೇವಾ ಮನೋಬಾವದಿಂದ ಆಯ್ಕೆ ಮಾಡಿಕೊಂಡಿದ್ದಾರೆ. ಇವರು 26/04/1992 ರಂದು ಡಾ. ಸುಶೀಲ್ ಕುಮಾರ ಅವರನ್ನ ವಿವಾಹವಾಗಿದ್ದಾರೆ. ಅವರು ಸಹ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಶಿವಮೊಗ್ಗ ಮೆಡಿಕಲ್ ಕಾಲೇಜಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಅತ್ಯುತ್ತಮ ಆಡಳಿತ ನಡೆಸಿ ಈ ಕಾಲೇಜಿಗೆ ಹೆಸರು ತಂದಿದ್ದಾರೆ. ಮತ್ತು ಮಕ್ಕಳಿಬ್ಬರು ಡಾ. ಆಕರ್ಶ ಎಸ್ ರಜಪೂತ್ ಮತ್ತು ಡಾ. ಐಶ್ವರ್ಯ ಎಸ್ ರಜಪೂತ್ ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ.

ಡಾ.ಗೀತಾ ಎಂ ಇವರು ದಿನಾಂಕ:21.11.1992 ರಂದು ತುಮಕೂರು ಜಿಲ್ಲೆ ತಿಪಟೂರು ತಾಲುಕಿನ ಹಾಲ್ಕುರ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆಗೆ ಸೇರಿ ಅಲ್ಲಿಯೂ ಜನಮನದಲ್ಲಿ ಪ್ರಖ್ಯಾತ ವೈದ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ತದನಂತರ ಸ್ತ್ರೀ ರೋಗ ಮತ್ತು ಪ್ರಸೂತಿ ಯ ಕುರಿತು ಸ್ನಾತಕೋತ್ತರ ಪದವಿಯನ್ನು ವಿಮ್ಸ್ ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆ ಹಾಗೂ ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.

ಸೇವಾಹಿರಿತನದನ್ವಯ 2026 ಜನವರಿ 01ರಂದು ಜಿಲ್ಲಾ ಶಸ್ತ್ರಚಿಕಿತ್ಸಕರ ಹುದ್ದೆಗೆ ಪ್ರಭಾರ ನೀಡಿದ ನಂತರ ಶಿವಮೊಗ್ಗ ಜಿಲ್ಲಾಮಟ್ಟದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸೇವೆಯ ಆರಂಭದಿಂದಲೂ ಇಲಾಖೆಗೆ ಹಾಗೂ ಸಾರ್ವಜನಿಕರಿಗೆ ತಾವು ಸಲ್ಲಿಸಿರುವ ಪ್ರಾಮಾಣಿಕ ಸೇವೆಯನ್ನು ಶ್ಲಾಘಿಸಿ ತಮ್ಮನ್ನು ಅತ್ಯಂತ ಗೌರವದಿಂದ ಶಿವಮೊಗ್ಗ ಜಿಲ್ಲಾ ಬೋಧನಾ ಆಸ್ಪತ್ರೆ. ಸಿಮ್ಸ್ ವತಿಯಿಂದ ಬಿಲ್ಕೊಡುಗೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ. ವೈದ್ಯಕೀಯ ನಿರ್ದೇಶಕರು . ಡಾ. ವಿರೂಪಾಕ್ಷಪ್ಪ. ವೈದ್ಯಕೀಯ ಅಧೀಕ್ಷಕರು, ಡಾ. ಟಿಡಿ ತಿಮ್ಮಪ್ಪ. ಮುಖ್ಯ ಆಡಳಿತ ಅಧಿಕಾರಿ ಉಮಾ ಸದಾಶಿವ. ನಾಗೇಂದ್ರ.ಡಾ. ನಾಗರಾಜ್ ನಾಯ್ಕ್.ನರ್ಸಿಂಗ್ ಸೂಪರ್ ಡೆಂಟ್ ಶೇಷಮ್ಮ. ಮಂಜುಳಾ. ಎಲ್ಲಾ ನರ್ಸಿಂಗ್ ಆಫೀಸರ್. ಮತ್ತು ರಿಯಾಜ್.ವಿಕಾಸ್. ಆಡಳಿತ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *