ಮಂಜುನಾಥ ಶೆಟ್ಟಿ…
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ವಿಶ್ವವಿದ್ಯಾಲಯ, ಶಂಕರಘಟ್ಟದ ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ “ಹಳೆಗನ್ನಡ ಓದು” ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿದರು.
ಉದ್ಘಾಟನೆಯನ್ನು ಬೆಂಗಳೂರು ವಲಯ ಜಂಟಿ ನಿರ್ದೇಶಕರಾದ ಮಾನ್ಯ ಶ್ರೀ ಅಶೋಕ್ ಎನ್. ಚಲವಾದಿರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಮಾನ್ಯ ಪ್ರೊ. ಶರತ್ ಅನಂತ್ ಮೂರ್ತಿರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹೆಚ್. ಡಾ.ಗುರುನಾಥ್ ಬಿ.ಎಂ., ಕನ್ನಡ ಭಾರತಿ ನಿರ್ದೇಶಕರಾದ ಪ್ರೊ. ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಉಪನ್ಯಾಸಕರಾದ ಪ್ರೊ.ಬಸವರಾಜ ಕಲ್ಗುಡಿ, ಪ್ರೊ.ರಾಜಶೇಖರಪ್ಪ, ಪ್ರೊ. ಪ್ರಶಾಂತ್ ನಾಯಕ್, ವಿವಿಧ ಪದವಿ ಕಾಲೇಜು ಉಪನ್ಯಾಸಕರುಗಳು ಭಾಗವಹಿಸಿದ್ದರು.