ಮಂಜುನಾಥ ಶೆಟ್ಟಿ…
2026-27 ನೇ ಸಾಲಿನ ‘ರಾಷ್ಟ್ರೀಯ ತೋಟಗಾರಿಕೆ ಮಿಷನ್’ ಯೋಜನೆಯಡಿ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕಾಗಿ ವಿವಿಧ ಶಿಲೀಂಧ್ರನಾಶಕ ಔಷಧಿಗಳನ್ನು ಖರೀದಿಸಿದ ಜಿಲ್ಲೆಯ ರೈತರಿಂದ ತೋಟಗಾರಿಕೆ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.
ಮಾರ್ಗಸೂಚಿಯನುಸಾರ, ರೈತರು 1 ಎಕರೆಗೆ ಕನಿಷ್ಠ ರೂ.2,000 ಮೌಲ್ಯದ ಶಿಲೀಂಧ್ರನಾಶಕವನ್ನು ಖರೀದಿಸಬಹುದಾಗಿದ್ದು, ಖರೀದಿ ವೆಚ್ಚಕ್ಕೆ ಶೇ. 30 ರಂತೆ ಪ್ರತಿ ಎಕರೆಗೆ ಗರಿಷ್ಠ ರೂ.600 ಸಹಾಯಧನ ಸಿಗಲಿದೆ. ಪ್ರತಿಯೊಬ್ಬ ಫಲಾನುಭವಿಯು ಗರಿಷ್ಠ 5 ಎಕರೆವರೆಗೆ (ಕನಿಷ್ಠ ರೂ.10,000 ಮೌಲ್ಯದ ಶಿಲೀಂಧ್ರನಾಶಕ ಖರೀದಿ) ಶೇ. 30 ರಷ್ಟು ಅಂದರೆ ಗರಿಷ್ಠ ರೂ.3,000 ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
ಈ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು:
ಪಹಣಿ, ಆಧಾರ್ ಕಾರ್ಡ್,
ಜಿಎಸ್ ಟಿ ಬಿಲ್ (ಖರೀದಿಸಿದ ಔಷಧಿಯ ಬಿಲ್)
ಜಾತಿ ಪ್ರಮಾಣ ಪತ್ರ (ಎಸ್ ಸಿ/ ಎಸ್ ಟಿ ರೈತರಿಗೆ ಮಾತ್ರ).
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ -08182-279415/ 9980009438, ಭದ್ರಾವತಿ-08282-295029/9108252536, ಶಿಕಾರಿಪುರ-08187-223544/ 8310662972, ಸೊರಬ – 08184-295112 /9663634388, ಸಾಗರ-08183-295124/ 9900046121, ಹೊಸನಗರ – 08185-295364/ 9591695327, ತೀರ್ಥಹಳ್ಳಿ-08181-228151/ 9108280642 ಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.