ಮಂಜುನಾಥ ಶೆಟ್ಟಿ…
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯ ಅಧ್ಯಕ್ಷರಾದ ಡಾ. ರವಿ ಶೆಟ್ಟಿ ಬೈಂದೂರ್ ಅವರ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಕ್ಷಾಂತರ ಸಣ್ಣ ಉದ್ದಿಮೆದಾರರ, ಬಡ ವ್ಯಾಪಾರಿಗಳ ಕಣ್ಣೀರು ಒರೆಸುವ ಮೂಲಕ ಸಹಾಯವನ್ನು ಎಲ್ಲರೂ ಸೇರಿ ಮಾಡಿದ್ದೇವೆ ಎಂದರು.ನೀವೆಲ್ಲರೂ ಸೇರಿ ನನ್ನ ಹುಟ್ಟು ಹುಟ್ಟು ಹಬ್ಬದ ವಿಶೇಷವಾಗಿ ಆಚರಿಸಿದ್ದಕ್ಕೆ ನಾನು ಯಾವಾಗಲೂ ನಿಮಗೆ ಚಿರಋಣಿ ಎಂದರು.
ಯಾವುದೇ ಒಂದು ಬೃಹತ್ ಕಾರ್ಯಕ್ರಮವು ಎಲ್ಲೂ ಸಣ್ಣದೊಂದು ಗೊಂದಲಕ್ಕೂ ಎಡೆ ಮಾಡಿಕೊಡದಂತೆ ಅತ್ಯಂತ ಶಿಸ್ತುಬದ್ಧವಾಗಿ ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀಮತಿ ಪೂಜಾ ಶೆಟ್ಟಿ ಮತ್ತು ಕಾರ್ಮಿಕ ತಂಡದ ಸಮಸ್ತ ಕಾರ್ಯಕರ್ತ ಬಂಧುಗಳಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಕಾರ್ಯದರ್ಶಿ ಮತ್ತು ಸಮಸ್ತ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.