ಮಂಜುನಾಥ ಶೆಟ್ಟಿ…
ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಸಂಪುಟ ವಿಸ್ತರಣೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಎರಡನೇ ಬಾರಿಗೆ ಮಧು ಬಂಗಾರಪ್ಪ ರವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸವನ್ನು ನಿರ್ವಹಿಸಿದ್ದಾರೆ.
ಸಚಿವ ಸ್ಥಾನಕ್ಕಾಗಿ ಜಿಲ್ಲೆಯಲ್ಲಿ ಮೂರು ಶಾಸಕರುಗಳಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಸಾಗರ ಶಾಸಕ ಬೀಳೂರು ಗೋಪಾಲಕೃಷ್ಣ ಭದ್ರಾವತಿ ಶಾಸಕ ಸಂಗಮೇಶ್ ವಿಧಾನ ಪರಿಷತ್ ಸದಸ್ಯ ಬಲಕಿಶ ಬಾನು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು.
ಹೈಕಮಾಂಡ್ಗೆ ತಿಳಿಸಿದ ನಾಯಕರು ತಾವು ಪಕ್ಷ ನಿಷ್ಠೆ ಹೊಂದಿದ್ದು ನಾಯಕರ ನಡುವೆ ತೀವ್ರ ಒತ್ತಡ ಹಾಕಿದ್ದರು.ಆದರೆ ಕೊನೆಗೆ ಮಧು ಬಂಗಾರಪ್ಪ ರವರಿಗೆ ಸಚಿವ ಸ್ಥಾನ ಒಲಿದಿದೆ.
ಸಹಜವಾಗಿ ಅವರು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾಗಲಿದ್ದಾರೆ.