ಮಂಜುನಾಥ ಶೆಟ್ಟಿ…

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಉಚಿತ ಸುಧಾರಿತ ವೃತ್ತಿಪರ ಉಪಕರಣಗಳನ್ನು ಪಡೆಯುವುದಕ್ಕಾಗಿ ಜಿಲ್ಲೆಯ ಅರ್ಹ ಗ್ರಾಮೀಣ ಪ್ರದೇಶದ ವೃತ್ತಿನಿರತ/ಕುಶಲಕರ್ಮಿಗಳಿಂದ ಹೊಲಿಗೆ, ಗಾರೆ, ಬಡಗಿ ಮತ್ತು ಜನರಲ್ ಇಂಜಿನಿಯರಿಂಗ್/ ವೆಲ್ಡಿಂಗ್ ವೃತ್ತಿಯ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನಿಸಿದೆ.


2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಗ್ರಾಮಾಂತರ ಪ್ರದೇಶದಲ್ಲಿ ವಾಸವಾಗಿರುವ ಕುಶಲಕರ್ಮಿಗಳಿಗೆ/ಇತರೆ ವೃತ್ತಿಪರರಿಗೆ ಮತ್ತು ಗುಡಿ ಕೈಗಾರಿಕೆಗಳಿಗೆ (ರೂ. 5.00 ಲಕ್ಷ ಯೋಜನಾ ವೆಚ್ಚ ಮೀರಬಾರದು) ಹಣಕಾಸು/ಬ್ಯಾಂಕ್ ಸಂಸ್ಥೆಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ವಿಧಿಸುವ ಶೇ.7% ಕ್ಕಿಂತ ಹೆಚ್ಚಿನ ಬಡ್ಡಿಯ ಬಾಬ್ತು ಹಣವನ್ನು ಮಾತ್ರ ಬಡ್ಡಿ ಸಹಾಯಧನ ನೀಡಬಹುದಾಗಿರುತ್ತದೆ.

ಬಡ್ಡಿಯ ದರವು ಶೇ.12% ಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಬಡ್ಡಿ ಸಹಾಯಧನ ಶೇ.5% ಕ್ಕೆ ಸೀಮಿತವಾಗಿರುತ್ತದೆ. ಗರಿಷ್ಠ ಅವಧಿ 5 ವರ್ಷ ಇದ್ದು, ಅರ್ಹ ಗ್ರಾಮೀಣ ಕೈಗಾರಿಕಾ ಘಟಕ/ಕುಶಲ ಕರ್ಮಿ ಪಟ್ಟಿಯನ್ನು ಹಣಕಾಸು ಸಂಸ್ಥೆಗಳಿಂದ ನಿಗಧಿತ ನಮೂನೆಯಲ್ಲಿ ಹಾಗೂ Annexure 43ನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ತಾಲ್ಲೂಕುವಾರು ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಯ ವಯಸ್ಸಿನ ಮಿತಿಯು ಕನಿಷ್ಠ 18 ವರ್ಷ ವಯೋಮಾನದವರಾಗಿದ್ದು, ಸರ್ಕಾರಿ ನೌಕರರು ಅಥವಾ ಅವರ ಅವಲಂಭಿತರು ಅರ್ಜಿ ಸಲ್ಲಿಸುವಂತಿಲ್ಲ.


ವೃತ್ತಿಪರ/ವೃತ್ತಿ ನಿರತ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಕಾರ್ಯಕ್ರಮ


ಅರ್ಜಿದಾರರ ಫೋಟೋ, ಭಾವಚಿತ್ರವಿರುವ ಗುರುತಿನ ಪ್ರಮಾಣ ಪತ್ರ (ಆಧಾರ್ ಕಾರ್ಡ್ ಇತ್ಯಾದಿ), ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ (ಎಸ್.ಸಿ/ಎಸ್.ಟಿ/ಅಲ್ಪಸಂಖ್ಯಾತರು ಮಾತ್ರ), ವೃತ್ತಿ ಧೃಡೀಕರಣ ಪ್ರಮಾಣ ಪತ್ರ (ಗ್ರಾ.ಪಂ ಪಂ.ಅ.ಅ/ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳಿಂದ), ದೈಹಿಕವಾಗಿ ಅಂಗವಿಕಲ ಪ್ರಮಾಣ ಪತ್ರ (ಅನ್ವಯಿಸಿದ್ದಲ್ಲಿ ಮಾತ್ರ) ನೀಡಬೇಕು.


ಬಡ್ಡಿ ಸಹಾಯಧನ ಕಾರ್ಯಕ್ರಮ


ಅರ್ಜಿದಾರರ ಫೋಟೋ, ಭಾವಚಿತ್ರವಿರುವ ಗುರುತಿನ ಪ್ರಮಾಣ ಪತ್ರ (ಆಧಾರ್ ಕಾರ್ಡ್ ಇತ್ಯಾದಿ), ಜಾತಿ ಪ್ರಮಾಣ ಪತ್ರ (ಎಸ್.ಸಿ/ಎಸ್.ಟಿ/ಅಲ್ಪಸಂಖ್ಯಾತರು ಮಾತ್ರ), ದೈಹಿಕವಾಗಿ ಅಂಗವಿಕಲ ಪ್ರಮಾಣ ಪತ್ರ (ಅನ್ವಯಿಸಿದ್ದಲ್ಲಿ ಮಾತ್ರ), ಬ್ಯಾಂಕಿನಿಂದ ಸಾಲ ಮಂಜೂರಾದ ಪತ್ರ ಹಾಗೂ ಸಾಲದ ತಃಖ್ತೆ (ಲೋನ್ ಸ್ಟೇಟ್ ಮೆಂಟ್) ಪತ್ರ,Annexure-43 (ಸಂಬಂಧಿಸಿದ ಬ್ಯಾಂಕಿನವರಿಂದ), ಎಂಎಸ್ ಎಂಇ ಪ್ರಮಾಣ ಪತ್ರ ಸಲ್ಲಿಸಬೇಕು.


ಅರ್ಜಿ ಸಲ್ಲಿಕೆಯ ಪ್ರಕ್ರಿಯೆ


ಅಧಿಕೃತ ಜಾಲತಾಣಕ್ಕೆ https//shivamogga.nic.in ಭೇಟಿ ನೀಡಿ, ಮುಖಪುಟದಲ್ಲಿ 2026-27ನೇ ಸಾಲಿನಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಉಚಿತವಾಗಿ ವೃತ್ತಿಪರ ಉಪಕರಣಗಳನ್ನು ಪಡೆಯಲು ಹಾಗೂ ಬಡ್ಡಿ ಸಹಾಯಧನಕ್ಕೆ-Apply here ಮೇಲೆ ಕ್ಲಿಕ್ಕಿಸಿ. ನಂತರ ಹೊಸ ಪುಟದೊಂದಿಗೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ತದನಂತರ ಅಲ್ಲಿ ಕೇಳಲಾದ ಮಾಹಿತಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿಯೊಂದಿಗೆ ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳನ್ನು ಸ್ವಯಂಧೃಡೀಕರಿಸುವುದು, 2 ಪಾಸ್‌ಪೋರ್ಟ್ ಸೈಜಿನ ಫೋಟೋಗಳೊಂದಿಗೆ ಹಾರ್ಡ್ ಕಾಪಿಯನ್ನು ತಾಲ್ಲೂಕಿನ ಸಂಬಂಧಪಟ್ಟ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಛೇರಿಗೆ ಮುದ್ದಾಂ ಅಥವಾ ಅಂಚೆ ಮೂಲಕ ಸಲ್ಲಿಸುವುದು.ಅರ್ಜಿಗಳನ್ನು ಜಿಲ್ಲಾ ಪಂಚಾಯತ್ ಅಧಿಕೃತ ಜಾಲತಾಣ https//shivamogga.nic.in ಮುಖಾಂತರ ಆ. 31ರೊಳಗಾಗಿ ಸಲ್ಲಿಸುವುದು. ಗುರಿಗಿಂತ ಅಧಿಕ ಅರ್ಜಿ ಸಲ್ಲಿಕೆಯಾದಲ್ಲಿ ಆಯ್ಕೆ ಸಮಿತಿ ವತಿಯಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು(ಗ್ರಾಮೀಣ ಕೈಗಾರಿಕೆ)ರವರ ಕಛೇರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಶಿವಪ್ಪ ನಾಯಕ ಕಛೇರಿ ಸಂಕೀರ್ಣ. ನೆಹರು ರಸ್ತೆ, ಶಿವಮೊಗ್ಗ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಅಥವಾ ಕಛೇರಿ ದೂರವಾಣಿ ಸಂಖ್ಯೆ: 08182-223376, ಕೈಗಾರಿಕಾ ವಿಸ್ತರಣಾಧಿಕಾರಿ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿರವರ ದೂ.ಸಂ.: 9380561275, ಕೈಗಾರಿಕಾ ವಿಸ್ತರಣಾಧಿಕಾರಿ ಸೊರಬ, ಶಿಕಾರಿಪುರ, ಹೊಸನಗರರವರ ದೂ. ಸಂ.:9481743640, ಕೈಗಾರಿಕಾ ವಿಸ್ತರಣಾಧಿಕಾರಿ ಸಾಗರರವರ ದೂ. ಸಂ.: 9448401714 ಇವರುಗಳನ್ನು ಸಂಪರ್ಕಿಸಬಹುದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *