ಮಂಜುನಾಥ ಶೆಟ್ಟಿ…

ಸಂಚಾರಿ ಸುರಕ್ಷತೆಯಲ್ಲಿ ವಾಹನ ಸವಾರರು ಅನುಸರಿಸಬೇಕಾದ ಕ್ರಮ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್‌ಗಳನ್ನು ಧರಿಸುವುದು, ಅತಿವೇಗದ ಚಾಲನೆಯನ್ನು ತಪ್ಪಿಸುವುದು, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವುದನ್ನು ತಡೆಯುವ ಮೂಲಕ ಸುರಕ್ಷಿತ ಸಂಚಾರವನ್ನು ಮಾಡುವ ಮೂಲಕ ಕಾನೂನಿನ ನಿಯಮಗಳನ್ನು ಪಾಲಿಸಬೇಕೆಂದು ಪೋಲಿಸ್ ಸರ್ಕಲ್‌ ಇನ್ಸ್‌ಪೆಕ್ಟರ್ ದೇವರಾಜ್ ತಿಳಿಸಿದರು.

ನಗರದ ಪ್ರತಿಷ್ಠಿತ ಟಿ.ವಿ.ಪಿ ಇಎಸ್‌ಐಎಎಂಎಸ್ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಯುವರೆಡ್ ಕ್ರಾಸ್‌ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅವರು ಸೈಬರ್ ಅಪಾಯಗಳು, ಮಾದಕ ದ್ರವ್ಯಗಳಿಂದ ಆಗುವ ದುಷ್ಪರಿಣಾಮಗಳು ಹಾಗೂ ಸಂಚಾರ ಸುರಕ್ಷತೆ, ಸೈಬರ್‌ಕ್ರೈಮ್, ಎಟಿಎಂಕಾರ್ಡ್ ಹ್ಯಾಕ್, ಎನಿಡೆಸ್ಕ್‌ಆಪ್ ಮೊದಲಾದ ಕ್ರೈಂ ಬಗ್ಗೆ ಮಾಹಿತಿ ನೀಡಿದ ಅವರು, ನಮ್ಮ ಮೊಬೈಲ್‌ಗಳನ್ನು ಹೇಗೆ ಹ್ಯಾಕ್ ಮಾಡಲಾಗುತ್ತದೆ ಹಾಗೂ ಅದರಿಂದ ನಾವು ಹೇಗೆ ಜಗರೂಕರಾಗಿರಬೇಕು. ಅಂತಹ ಸಮಸ್ಯೆಗಳು ಬಂದಾಗ ಸೈಬರ್ ಕ್ರೈಮ್‌ದೂರವಾಣಿ ಸಂಖ್ಯೆ 1930ಕ್ಕೆ ಕರೆಯನ್ನು ಮಾಡುವುದರ ಮೂಲಕ ದೂರನ್ನುದಾಖಲಿಸಬೇಕೆಂದು ತಿಳಿಸಿದರು.

ಕೆಲಸ ಕೊಡಿಸುವುದಾಗಿ ಹೇಳುವ ವಂಚನೆಯ ಜಾಲಗಳು, ಸಾಲ ನೀಡುವುದಾಗಿ ಹೇಳುವ ವಂಚನೆಯ ಜಾಲಗಳು, ಒಎಲ್‌ಎಕ್ಸ್ ಮೊದಲಾದವುಗಳಲ್ಲಿ ಆಗುವಂತಹ ವಂಚನೆಗಳ ಕುರಿತು ವೀಡಿಯೋಗಳ ಮೂಲಕ ಪ್ರದರ್ಶಿಸಿದರು. ಮಾದಕ ವ್ಯಸನಗಳಿಗೆ ದಾಸರಾಗುವುದರಿಂದ ಉಜ್ವಲವಾದ ಭವಿಷ್ಯವು ನಾಶಗೊಳ್ಳುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಸುದರ್ಶನ್ ಜಿ.ಎಂ. ಅವರು ಮಾತನಾಡಿ, ಈ ರೀತಿಯ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಿ ಅವರಲ್ಲಿ ಎಚ್ಚರ ಉಂಟು ಮಾಡುತ್ತವೆ. ವಿದ್ಯಾರ್ಥಿಗಳು ಕಾನೂನಿನ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಅದನ್ನು ಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.

ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್ ಡಿ., ಯುವರೆಡ್‌ಕ್ರಾಸ್‌ಘಟಕದ ಸಂಚಾಲಕಿ ಅಶ್ವಿನಿ ಹೆಚ್.ಸಿ., ಕಾರ್ಯಕ್ರಮಾಧಿಕಾರಿ ಡಾ.ಎನ್. ಪ್ರವೀಣ್‌ಚಂದ್ರ, ಹೆಚ್‌ಇಎಂ ವಿಭಾಗದ ಉಪನ್ಯಾಸಕ ಉತ್ಕರ್ಷ್ ಸಿಂಗ್ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಪೂಜ ಸ್ವಾಗತಿಸಿದರು. ಜಾಹ್ನವಿ ವಂದಿಸಿ, ಜನ್ಮಶ್ರೀ ನಿರೂಪಿಸಿದರು.

Leave a Reply

Your email address will not be published. Required fields are marked *