ಮಂಜುನಾಥ ಶೆಟ್ಟಿ…

ಅಮೃತ ಅನ್ನದಾಸೋಹ ಪ್ರತಿಷ್ಠಾನದ ವತಿಯಿಂದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಅನ್ನದಾಸೋಹದ ಕಾರ್ಯಕ್ರಮವು 200 ನೇ ದಾಖಲೆ ದಿನಕ್ಕೆ ಕಾಲಿಟ್ಟಿರುವುದು ಅಭಿಮಾನದ ಮತ್ತು ಹೆಮ್ಮೆಯ ಸಂಗತಿಯಾಗಿದೆ.
ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಮತ್ತು ನಿರಾತಂಕವಾಗಿ 200 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಅನ್ನದಾಸೋಹ ಸೇವಾ ಕಾರ್ಯಕ್ರಮದ ರೂವಾರಿಗಳು ಎಂದರೆ ಉದಾರವಾಗಿ ಸಹಾಯ ನೀಡಿದ ದಾನಿಗಳು, ಸಂಘ ಸಂಸ್ಥೆಗಳು, ಪ್ರಾಯೋಜಕರು ಮತ್ತು ನಮ್ಮ ಧಣಿವರಿಯದ ಕಾರ್ಯಕರ್ತರು. ಇವರೆಲ್ಲರ ನಿಸ್ವಾರ್ಥ ಸೇವಾ ಮನೋಭಾವದಿಂದ ಈ ಸೇವೆ ಸಾಧ್ಯವಾಗಿದೆ.
ಇವರೆಲ್ಲರಿಗೂ ಪ್ರತಿಷ್ಠಾನದ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು ಮತ್ತು ವಂದನೆಗಳು.
200 ನೇ ದಿನದ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ನಾಳೆ ಬೆಳಗ್ಗೆ 11 ಗಂಟೆಗೆ
200 ನೇ ದಿನದ ಸಂಭ್ರಮಾಚರಣೆ
ಆಯೋಜನೆ ಮಾಡಿದ್ದೇವೆ.ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಬೇಕಾಗಿ ಅತ್ಯಂತ ವಿನಮ್ರತೆಯಿಂದ ಕೋರುತ್ತೇವೆ.
ವಂದನೆಗಳೊಂದಿಗೆ…
ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸಮಸ್ತ ಕಾರ್ಯಕರ್ತರು,
ಅಮೃತ ಅನ್ನದಾಸೋಹ ಪ್ರತಿಷ್ಠಾನ, ಶಿವಮೊಗ್ಗ