ಮಂಜುನಾಥ ಶೆಟ್ಟಿ…
ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪ್ಪನಾಯಕನ ಸರ್ಕಲ್‌ನಲ್ಲಿ ಆಟೋ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರೀ ಪೇಯ್ಡ್ ಕೌಂಟರ್ ಗೆ ಪ್ರಾರಂಭವಾಯಿತು.
ಆಟೋ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವುದನ್ನು ತಡೆಗಟ್ಟುವುದು ಪ್ರಯಾಣಿಕರಿಗೆ ಪಾರದರ್ಶಕ ಹಾಗೂ ನಿಗದಿತ ದರದಲ್ಲಿ ಆಟೋ ಸೇವೆ ದೊರಕುವಂತೆ ಮಾಡುವುದು ಮತ್ತು ಆಟೋ ಪ್ರಯಾಣವನ್ನು ಮತ್ತಷ್ಟು ಸುರಕ್ಷಿತ ಹಾಗೂ ಸುಗಮಗೊಳಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ, ಶಿವಮೊಗ್ಗ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಸಾರಿಗೆ ಇಲಾಖೆ ಇವರ ಸಂಯುಕ್ತ ಸಹಯೋಗದಲ್ಲಿ, ಭೀಮ ಗೋಲ್ಡ್ ಸಂಸ್ಥೆಯ ಸಹಕಾರದೊಂದಿಗೆ ನಿರ್ಮಿಸಲಾಗಿರುವ ಆಟೋ ಪ್ರೀ-ಪೇಯ್ಡ್ ಕೌಂಟರ್‌ಗೆ ಅಧಿಕೃತವಾಗಿ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ; ಶ್ರೀ ಸಂಜುಕುಮಾರ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ‘ಬಿ’ ಉಪವಿಭಾಗ; ಶ್ರೀ ದೇವರಾಜ್ ಟಿ.ವಿ., ಪೊಲೀಸ್ ಇನ್ಸ್‌ಪೆಕ್ಟರ್, ಶಿವಮೊಗ್ಗ ಸಂಚಾರ ವೃತ್ತ; ಶ್ರೀ ಅಕ್ಬರ್ ಮುಲ್ಲಾ; ಶ್ರೀಮತಿ ಭಾರತಿ, ಪೊಲೀಸ್ ಉಪನಿರೀಕ್ಷಕರು, ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಠಾಣೆಯ ಸಿಬ್ಬಂದಿಯವರು, ಭೀಮ ಗೋಲ್ಡ್ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.