ಮಂಜುನಾಥ ಶೆಟ್ಟಿ…
ಜಾಗತಿಕ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ವಿಶೇಷವಾಗಿ ಸನ್ಮಾನಿಸಿದರು.ನಮ್ಮ ಕುಡ್ಲ ನಮ್ಮ ಕಂಬಳ ಟೀಮ್ ಪಾಲೆಮಾರ್ ಗ್ರೂಪ್ ವತಿಯಿಂದ ಆಯೋಜಿಸಿರುವ ನಮ್ಮ ಕಂಬಳ ಪ್ರಶಸ್ತಿ 2026 ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಮ್ಮ ಕಂಬಳ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಮೂಲ್ಕಿ ಅರಸರಾದ ದುಗ್ಗಣ್ಣ ಸಾವಂತರು ಮಾಜಿ ಸಚಿವರಾದ ಕೃಷ್ಣ ಪಾಲೆಮಾರ್ ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒಕ್ಕೂಟದ ನಿರ್ದೇಶಕರಾದ ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಮಿಥುನ್ ರೈ ಮಾಜಿ ಸಚಿವರಾದ ರಾಮನಾಥ್ ರೈ ಸುರೇಶ್ ಶೆಟ್ಟಿ ಗುಣಪಾಲ ಕಡಂಬ ನಮ್ಮ ಕುಡ್ಲ ನಿರ್ದೇಶಕರಾದ ಲೀಲಾಕ್ಷಿ ಕರ್ಕೇರ ಸಹಾಯಕ ಹರೀಶ್ ಕರ್ಕೇರ ಮತ್ತು ಸಹೋದರ ಭಾಗವಹಿಸಿದ್ದರು.