ಮಂಜುನಾಥ್ ಶೆಟ್ಟಿ…

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್.ಸುರೇಶ್ ಅಮಾನತು.
ವಿದ್ಯಾನಗರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕನಾಗಿ ಹಾಸ್ಟೆಲ್ ನ ಆಹಾರ ಪದಾರ್ಥಗಳ ಟೆಂಡರ್ ಪೀಠೋಪಕರಣ ಇತ್ಯಾದಿ ಸಾಮಾಗ್ರಿಗಳ ಖರೀದಿಯಲ್ಲಿ ತಮಗೆ ಬೇಕಾದವರಿಗೆ ಟೆಂಡರ್ ನೀಡಿದ್ದು. ಅಕ್ರಮವಾಗಿ ಅವ್ಯವಹಾರ ನಡೆಸಿದ್ದ ಹಿನ್ನಲೆಯಲ್ಲಿ ಜಿ.ಪಂ.ಸಿ.ಇ.ಓ ರವರು ತನಿಖೆಗೆ ಆದೇಶಿಸಿ ನೋಟಿಸ್ ನೀಡಿದ್ದರೆನ್ನಲಾಗಿದ್ದು.ಅವರ ಪತ್ರಕ್ಕೆ ಯಾವುದೇ ಸಮರ್ಪಕ ಉತ್ತರ ಸಿಗದ ಹಿನ್ನಲೆಯಲ್ಲಿ ಅಮಾನತ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಲವು ಅಕ್ರಮಗಳಿಗೆ ಹೆಸರಾಗಿದ್ದ ಕೆ.ಎನ್.ಸುರೇಶ್ ಸ.ನಿರ್ದೇಶಕನಾಗಿ ಬಂದ ಕೆಲ ತಿಂಗಳಲ್ಲೇ ಹಾಸ್ಡೆಲ್ ವಿದ್ಯಾರ್ಥಿನಿ ಆತ್ಮಹತ್ಯೆ ನಡೆದಿತ್ತಲ್ಲದೆ ಆತನ ವ್ಯಾಪ್ತಿಯಲ್ಲಿ ಅನೇಕ ಹಾಸ್ಟೆಲ್ ಗಳ ಆಹಾರ ಪದಾರ್ಥ ಪೀಠೋಪಕರಣ ಮುಂತಾದ ವಸ್ತುಗಳ ಖರೀದಿಯ ಟೆಂಡರ್ ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿದ್ದು ಇವೆಲ್ಲದರ ಬಗ್ಗೆ ಸೂಕ್ತ ತನಿಖೆಯನ್ನು ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಕೈಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *