ಮಂಜುನಾಥ್ ಶೆಟ್ಟಿ…
ಶಿವಮೊಗ್ಗ: ಇಲ್ಲಿಯ 31ನೇ ವಾರ್ಡ್‌ನ ಇಲ್ಯಾಜ್ ನಗರ ವ್ಯಾಪ್ತಿಯಲ್ಲಿ ರೂ.3.00 ಕೋಟಿ ಮೊತ್ತದ ಅನುಮೋದಿತ ಅಭಿವೃದ್ಧಿ ಕಾಮಗಾರಿಗಳನ್ನು ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಲ್ಲಿ ಕೈಗೊಳ್ಳುತ್ತಿರುವ ಕುರಿತು ತುರ್ತು ಪರಿಶೀಲನೆ ನಡೆಸಿ, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಪೀಸ್ ಅಸರ್ಗನೈಸೇಷನ್ನಿನ ಮುಖಂಡರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕರಿಗೆ ಕಾಮಗಾರಿಯ ಸಂಪೂರ್ಣ ಮಾಹಿತಿ ನೀಡುವ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ 31ನೇ ವಾರ್ಡ್ ಇಲ್ಯಾಜ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಮತ್ತು ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ತೀವು ಅಸಮಾಧಾನ ಉಂಟಾಗಿದೆ. ಸರ್ಕಾರದ ದಾಖಲೆಯ ಪ್ರಕಾರ ಆರ್.ಎಂ.ಎಲ್ ನಗರ 2ನೇ ಹಂತ, ಇಲ್ಯಾಜ್ ನಗರ ಹಾಗೂ ಶ್ರೀನಿವಾಸ ಲೇಔಟ್ ಮುಖ್ಯ ಮತ್ತು ಅಡ್ಡ ರಸ್ತೆಗಳ ಕಾಮಗಾರಿಗೆ 3ಕೋಟಿ ರೂ.ಅನುಮೋದನೆ ಅಸಗಿದೆ. ಆದರೆ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿದೆ. ವಿಶೇಷವಾಗಿ 10ನೇ ತಿರುವಿನಲ್ಲಿ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ಮಾಡಿ ಬಾಕಿ ಉಳಿಸಲಾಗಿದೆ. 13ನೇ ತಿರುವಿನಲ್ಲಿ ರಸ್ತೆ ಹಾಗೂ ಇತರ ಕಾಮಗಾರಿಗಾಗಿ ಮಣ್ಣು ಅಗೆದು ಬಿಟ್ಟಿದ್ದರೂ ಇದುವರೆಗೆ ಯಾವುದೇ ಸಮರ್ಪಕ ಕಾಮಗಾರಿ ಕೈಗೊಳ್ಳಲಾಗಿಲ್ಲ.
ಇದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಇದಲ್ಲದೆ ಹಲವು ಕಡೆ ಚರಂಡಿಗಳು ಕೊಳಚೆ ಹಾಗೂ ಮಣ್ಣಿನಿಂದ ತುಂಬಿಕೊಂಡಿದ್ದು, ಮಳೆ ಮತ್ತು ತ್ಯಾಜ್ಯ ನೀರು ರಸ್ತೆಯ ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಮೇಲೆಯೇ ನಿಲ್ಲುವ ಪರಿಸ್ಥಿತಿ ತೊಂದರೆಯಾಗುವುದರ ಜೊತೆಗೆ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕವಿದೆ. ಅದೇ ರೀತಿ ಇಲ್ಯಾಜ್ ನಗರದಲ್ಲಿರುವ ಸರ್ಕಾರಿ ಮೌಲಾನಾ ಆಂಗ್ಲ ಶಾಲೆಗೆ ತೆರಳುವ ರಸ್ತೆ ಅತ್ಯಂತ ಹದಗೆಟ್ಟಿದ್ದು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಸುರಕ್ಷಿತವಾಗಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಮಕ್ಕಳ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಶಾಲೆಯ ಉಂಟಾಗಿದೆ.
ಮುಂಭಾಗದ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯನ್ನು ತುರ್ತಾಗಿ ಸುಧಾರಿಸುವ ಅಗತ್ಯವಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಸಂಪೂರ್ಣ ಕಾಮಗಾರಿಯನ್ನು ತಾಂತ್ರಿಕವಾಗಿ ಪರಿಶೀಲಿಸಬೇಕು. ಸ್ಥಳದ ಅವಶ್ಯಕತೆಗಳಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ಸರ್ವೇ ನಡೆಸಿ, ಸರಿಯಾದ ವಿನ್ಯಾಸ ಮತ್ತು ತಾಂತ್ರಿಕ ಮಾನದಂಡಗಳಂತೆ ರಸ್ತೆ, ಚರಂಡಿ ಹಾಗೂ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅರ್ಧಕ್ಕೆ ನಿಲ್ಲಿಸಿರುವ 10ನೇ ತಿರುವು ಮತ್ತು 13ನೇ ತಿರುವಿನ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದ ಪೂರ್ಣಗೊಳಿಸಬೇಕು. ಅಲ್ಲದೆ ಕಾಮಗಾರಿಯ ಅನುಮೋದಿತ ಮೊತ್ತ, ಕಾಮಗಾರಿಯ ವಿವರ, ಗುತ್ತಿಗೆದಾರರ ಹೆಸರು, ಕಾಮಗಾರಿಯ ಅವಧಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮಾಹಿತಿಯನ್ನು ಒಳಗೊಂಡ ನಾಮಫಲಕಗಳನ್ನು ಪ್ರತಿಯೊಂದು ಕಾಮಗಾರಿ ಸ್ಥಳದಲ್ಲೂ ಕಡ್ಡಾಯವಾಗಿ ಅಳವಡಿಸಿ ಸಾರ್ವಜನಿಕರಿಗೆ ಪಾರದರ್ಶಕವಾಗಿ ಮಾಹಿತಿ ನೀಡಬೇಕು.
ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಲೋಪ, ನಿಯಮ ಉಲ್ಲಂಘನೆ ಅಥವಾ ಸಾರ್ವಜನಿಕ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಹಣದ ದುರುಪಯೋಗ ಕಂಡುಬಂದಲ್ಲಿ ಸಂಬಂಧಪಟ್ಟವರ ಕೈಗೊಂಡು, ಅಗತ್ಯವಿದ್ದಲ್ಲಿ ಕಳಪೆ ಕಾಮಗಾರಿಯನ್ನು ಸಂಬಂಧಪಟ್ಟವರ ಜವಾಬ್ದಾರಿಯಲ್ಲಿ ಮರುನಿರ್ಮಾಣ ಮಾಡಿಸಬೇಕು. ಆದ್ದರಿಂದ ಈ ದೂರನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಸ್ಥಳ ಪರಿಶೀಲನೆ ಹಾಗೂ ತಾಂತ್ರಿಕ ಗುಣಮಟ್ಟ ಪರಿಶೀಲನೆ ನಡೆಸಿ. ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ. ಕೈಗೊಂಡ ಕ್ರಮದ ವರದಿಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಅಸಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ರಿಯಾಜ್ ಅಹಮ್ಮದ್, ಇಮ್ರಾನ್, ಮಹಮ್ಮದ್ ಶಫಿ, ಹಿದಾಯತುಲ್ಲಾ, ಅಬ್ದುಲ್ ಗನಿ, ರಾಜೇಶ್ ಮೊದಲಾದವರಿದ್ದರು.