ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಪಿಡಿಒ ನಿವಾಸದ ಬೀಗ ಮುರಿದು ಚಿನ್ನಾಭರಣ, ಬೆಳ್ಳಿ ವಸ್ತು ಹಾಗೂ ನಗದು ಕಳವು ಮಾಡಿದ್ದ ಪ್ರಕರಣವನ್ನು ಕೋಟೆ ಠಾಣೆ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. 

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದ ವಾಸದ ಮನೆಯಲ್ಲಿ ಮನೆಯ ಬಾಗಿಲಿನ ಬೀಗವನ್ನು ಮುರಿದು ಮನೆಯ ಒಳಗಿದ್ದ ಸುಮಾರು 943 ಗ್ರಾಂ ತೂಕದ ಬಂಗಾರದ ಒಡವೆಗಳನ್ನು. 500 ಗ್ರಾಂ ಬೆಳ್ಳಿ ವಸ್ತುಗಳನ್ನು. 86,000 ನಗದು ಹಣವನ್ನು ಮತ್ತು ಹಾಗು ಇತರೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನವಾದ ಬಗ್ಗೆ ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆ ಗುನ್ನೆ ನಂ. 175/2026 ಕಲಂ 331(3).305 ಬಿಎನ್ಎಸ್* ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡುವ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ನಿಖಿಲ್ .ಬಿ ಐ.ಪಿ.ಎಸ್. ರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕಾರಿಯಪ್ಪ ,ಮತ್ತು ಶಿವಮೊಗ್ಗ ಉಪವಿಭಾಗ-ಎ ಡಿ.ವೈಎಸ್.ಪಿ. ರವರಾದ ಶ್ರೀ. ಶೀಲವಂತ ಹೊಸಮನಿ ರವರ ಮಾರ್ಗದರ್ಶನದಲ್ಲಿ ಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ರವರಾದ ಶ್ರೀ. ಹರೀಶ ಕೆ ಪಟೇಲ್ ಹಾಗೂ ಸಿಬ್ಬಂದಿಯವರಾದ, ಹೆಚ್.ಸಿ. 215 ಧನರಾಜ್, ಹೆಚ್.ಸಿ. – 28 ವಸಂತ್ ಅರ್, ಸಿಪಿಸಿ-1108 ರಾಜು, ಸಿಪಿಸಿ-1310 ಕಿಶೋರ ವಿ, ಸಿಪಿಸಿ-1608 ರಂಗನಾಥ್ ಕೆ, ಸಿ.ಪಿ.ಸಿ-1620 ಗೊರವರ ಅಂಜಿನಪ್ಪ, ಸಿ,ಪಿ,ಸಿ-1093 ನವೀನ್ ಹೆಚ್,ಎನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ *ಗುರುರಾಜ್ ಸಿ,ಹೆಚ್,ಸಿ-121, ಇಂದ್ರೇಶ್ ಸಿ,ಹೆಚ್,ಸಿ-81, ತೀರ್ಥಲಿಂಗ್-ಸಿ,ಪಿ,ಸಿ 1659* ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ. ಸದರಿ ತನಿಖಾ ತಂಡವು ದಿ:01/10/2025 ರಂದು ಆರೋಪಿತನಾದ ಮೊಹಮ್ಮದ್ ರಫೀಕ್ @ ಕರಿಯ ಹಗರಿಬೊಮ್ಮನಹಳ್ಳಿವಾಸಿ ಈತನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಂದ 80,92,435/-ರೂಗಳ ಮೌಲ್ಯದ 558.099 ಗ್ರಾಂ ಬಂಗಾರದ ಒಡವೆಗಳು, ಹಾಗು 20 ಲಕ್ಷ ರೂಪಾಯಿ ನಗದು ಹಣವನ್ನು ಮತ್ತು ಇತರೆ 1.85,000/- ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಸೇರಿ *ಒಟ್ಟಾರೆ 1,02,77,435/- ರೂಪಾಯಿ ಮೌಲ್ಯದ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಈ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೂ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Leave a Reply

Your email address will not be published. Required fields are marked *