ಮಂಜುನಾಥ್ ಶೆಟ್ಟಿ
ಬಡತನದ ಬೇಗೆಯಲ್ಲಿ ಬೆಂದರು ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ ತಮ್ಮ ಕವಿತೆಗಳ ಮೂಲಕ ಮಾಡಿದರಿಗೆ ಸಾಹಿತ್ಯದ ಮಹತ್ವ ತಿಳಿಸಿದ ದಿವಂಗತ ಡಾ ಎನ್ ಎಸ್ ಲಕ್ಷ್ಮಿ ನಾರಾಯಣ ಭಟ್ ರು ಎಂದು ಸಾಹಿತಿ ಎಂ ಎನ್ ಸುಂದರ್ ರಾಜ್ ಸ್ಮರಿಸಿದರು.
ನಗರದ ಮಧುರ ಪ್ಯಾರಾಡೈಸ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ ಹಾಗೂ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಡಾ ಎನ್ ಎಸ್ ಲಕ್ಷ್ಮಿ ನಾರಾಯಣ ಭಟ್ ರ 90ನೇ ಜನ್ಮದಿನ ಅಂಗವಾಗಿ ಆಯೋಜಿಸಿದ ತೂಗಿ ತೂಗಿ ಮರಗಳೇ ಇಳೆಗೆ ಇಳಿದ ವರಗಳೇ ಶಿಷಿಕೆಯ ಗಾನ ಸಮರ್ಪಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಂತ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸತ್ಯನಾರಾಯಣ ಉಪಸ್ಥಿತರಿದ್ದರು. ಮಧುರ ನಾಗರಾಜ ಮತ್ತು ಶೋಭಾ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.