ಮಂಜುನಾಥ್ ಶೆಟ್ಟಿ…

ಲೈಫ್ ಲೈನ್ ಫೀಡ್ಸ್ ಸಂಸ್ಥೆ ಮುಖ್ಯಸ್ಥರಾದ ಕಿಶೋರ್ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕೆ ಕೀರ್ತಿ ತಂದಯಿರುವ ಪ್ಯಾರಾ ಏಷಿಯನ್ ಗೇಮ್ಸ್ ವಿಜೇತರಿಗೆ ಅದ್ದೂರಿಯಾಗಿ ಗೌರವಿಸಿ ಸನ್ಮಾನಿಸಲಾಯಿತು.


ನಗರದ ಆಜಾದ್ ಪಾರ್ಕಿನಿಂದ ಸಾಂಸ್ಕೃತಿಕ ಕಾಲ ತಂಡದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ನಂತರ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಗೌರವಿಸಿ ಸನ್ಮಾನಿಸಲಾಯಿತು.
ಪ್ಯಾರಾ ಏಷಿಯನ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ದೇಶದ ಗೌರವ ಹೆಚ್ಚಿಸಿರುವ ರಾಧಾ ವೆಂಕಟೇಶ ,ರವಿ ರಂಗೋಲಿ , ರಕ್ಷಿತಾ ರಾಜು ಮತ್ತು ರವಣಿ ವಲನ್ ಸೈನ್ ಅವರನ್ನು ಭವಿಷ್ಯದ ಕ್ರೀಡಾಪಟುಗಳನ್ನು ಮತ್ತು ಅವರ ಗೈಡ್ ಗಳನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಸ್ಥರಾದ ಕಿಶೋರ್ ಕುಮಾರ್ ಹೆಗ್ಡೆ ಅವರು ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡು ದೇಶಕ್ಕೆ ಮತ್ತು ಜಿಲ್ಲೆಗೆ ಹೆಸರು ತಂದು ಪದಗಳನ್ನು ಗೆದ್ದಿದ್ದಾರೆ. ನಮ್ಮ ಸಂಸ್ಥೆಯ ವತಿಯಿಂದ ಅವರಿಗೆ ಅದ್ದೂರಿಯಾಗಿ ಸನ್ಮಾನಿಸಿದ್ದೇವೆ ಎಂದರು. ಮುಂದಿನ ದಿನಗಳಲ್ಲಿ ಅವರಿಗೆ ನಾವು ಎಲ್ಲರಿಗೂ ಪ್ರೀತಿಯಿಂದಲೂ ಸಹಕಾರ ನೀಡಲು ಬದ್ಧ ಎಂದರು.


ಈ ಸಂದರ್ಭದಲ್ಲಿ ಯತಿರಾಜ್ ಶೆಟ್ಟಿ ಗಿರೀಶ್ ಶರತ್ ಕುಮಾರ್ ಮಂಜುನಾಥ್ ಜೋಶಿ ತೇಜಸ್ ಪ್ರಸಾದ್ ಹಾಜರಿದ್ದರು.

Leave a Reply

Your email address will not be published. Required fields are marked *