ಇದು ಇಂದು ಬೆಜ್ಜವಳ್ಳಿಯ ಪೆಟ್ರೋಲ್ ಬಂಕಿನಲ್ಲಿ ಕಂಡುಬಂದ ದೃಶ್ಯ. 100, 150 ಮೀಟರ್ ವ್ಯಾಪ್ತಿಯಲ್ಲಿ ಜಾತ್ರೆಯ ರೀತಿಯಲ್ಲಿ ಕನಿಷ್ಟ ಸುಮಾರು 2500 ಜನ ಸೇರಿದ್ದಾರೆ. ಪೊಲೀಸ್ ಅಧಿಕಾರಿಗಳೂ ಇಲ್ಲೇ ಅಡ್ಡಾಡುತ್ತಾ ಇದ್ದಾರೆ ಬಿಟ್ಟರೆ ಜನರನ್ನು ನಿಯಂತ್ರಿಸುವ ಯಾವುದೇ ಗೋಜಿಗೂ ಹೋಗುತ್ತಿಲ್ಲ. ಪ್ರತೀ ತರಕಾರಿ, ದಿನಸಿ ಅಂಗಡಿಗಳ ಎದುರು ಜನರ ಸರತಿ ಸಾಲು ರಸ್ತೆಗೂ ದಾಟಿ ನಿಂತಿದೆ. ಪೆಟ್ರೋಲ್ ಬಂಕ್ ನಲ್ಲೇ 30 ದಿಂದ 50 ಕಾರುಗಳು, 60 ರಿಂದ 70 ಬೈಕುಗಳು, ಪೆಟ್ರೋಲ್ ಕ್ಯಾನ್ ಹಿಡಿದು ಕನಿಷ್ಟ 100 ಜನರ ಕ್ಯೂ ನಿಂತಿದ್ದಾರೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ