ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ 2ನೇ ಬಾರಿ ಸ್ಪರ್ಧಿಸಿರುವ ತಮಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮನವಿ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳ ಅವಧಿಯಲ್ಲಿ ಉತ್ತಮ ಕೆಲಸಗಳನ್ನ ಮಾಡಲಾಗಿದೆ. ದತ್ತಿನಿಧಿಕಾರ್ಯಕ್ರಮಗಳನ್ನು ಆಶಯಕ್ಕೆ ತಕ್ಕಂತೆ ನಡೆಸಿಕೊಂಡು ಬರಲಾಗಿದೆ. ಮಹಿಳಾ ಸಾಹಿತಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತೆ ಇದ್ದ ಸಾಹಿತಿಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಲಾಗಿದೆ ಎಂದರು.  ಕನ್ನಡ ಸಾಹಿತ್ಯ ಪರಿಷತ್ನ ಆಶಯಕ್ಕೆ ತಕ್ಕಂತೆ ಕೆಲಸ ಮಾಡುವ ಮೂಲಕ ಪರಿಷತ್ ಕಟ್ಟಿದ ಹಿರಿಯರಿಎ ಗೌರವ ಸಮರ್ಪಣೆ ಮಾಡಲಾಗಿದೆ. ಜಿಲ್ಲೆಯ ಸಾಹಿತ್ಯ ಸೌಧ ನಿರ್ಮಾಣದಲ್ಲಿ ಸಾವಿರಾರು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗಿದ್ದು, ಅವರೆಲ್ಲಾ ಇಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 600 ಕ್ಕೂ ಹೆಚ್ಚು ಹೊಸ ಪ್ರತಿಭೆಗಳ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಮಹಿಳೆಯರ ಪುಸ್ತಕಗಳೇ 330ಕ್ಕೂ ಹೆಚ್ಚು ಇವೆ ಎಂದು ಹೇಳಿದರು. 

ಸಾಹಿತ್ಯ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಸ್ಪರ್ಧೆ ಮಾಡಿದ್ದು, ಗೆದ್ದರೆ ಇನ್ನಷ್ಟು ರಚನಾತ್ಮಕ ಕೆಲಸ ಮಾಡಲಾಗುತ್ತದೆ ಎಂದ ಅವರು, ರಾಜಕೀಯ ಪಕ್ಷಗಳು ಬೆಂಬಲಿಸುತ್ತಿವೆ ಎಂಬುದು ಸುಳ್ಳು. ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ನೀಡುತ್ತಿಲ್ಲ. ಬದಲಾಗಿ ಸಮಾನ ಮನಸ್ಕ ಸಂಘಟನೆಗಳು ಬೆಂಬಲ ನೀಡಿವೆ. ಅಂತಹ ಸಂಘಟನೆಗಳ ಗೆಳೆಯರು ಪ್ರಚಾರಕ್ಕೆ ಬರುತ್ತಿದ್ದಾರೆ ಎಂದರು.  ಬೆಂಬಲ ನೀಡಿ ಪ್ರಚಾರಕ್ಕೆ ಬರುವವ ಯಾರನ್ನೂ ಕೂಡ ಬೇಡ ಎನ್ನುವುದಿಲ್ಲ. ಕೆಲವು ಸಂಘಗಳಲ್ಲಿಯೂ ಇದ್ದು, ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರು ಕೆಲವೊಂದು ಸಭೆಗಳಲ್ಲಿ ಪಾಲ್ಗೊಂಡರೆ ಬೇಡ ಎನ್ನಲು ಆಗುವುದಿಲ್ಲ . ಅದೇ ರಾಜಕೀಯ ಪಕ್ಷಗಳ ಬೆಂಬಲ ಎಂದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಸುಂದರರಾಜ್, ರುದ್ರಮುನಿ ಸಜ್ಜನ್, ಮಧುಗಣಪತಿರಾವ್ ಮಡೇನೂರು, ಮಧುಮತಿ ಮಂಜುನಾಥ, ಐಪಿ ಶಾಂತರಾಜ್, ರುದ್ರಪ್ಪ, ಸುಮಿತ್ರಮ್ಮ, ಶ್ರೀರಂಜನಿ ದತ್ತಾತ್ರಿ ಮತ್ತಿತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…