ಆಯನೂರಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಇದ್ದು . 10 ಗಂಟೆಯ ನಂತರ ಸಂಚಾರಕ್ಕೆ ನಿರ್ಬಂಧವಿತ್ತು . ಆಯನೂರು ಸರ್ಕಲ್ ನಲ್ಲಿ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಯಿತು. ಅಗತ್ಯ ಪಾಸ್ ಇದ್ದವರಿಗೆ ಮಾತ್ರ ವಿನಾಯಿತಿ ಕೊಡಲಾಯಿತು .
ಮೆಡಿಕಲ್ ಶಾಪ್ ಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳು ಮುಚ್ಚಿದ್ದವು.
ಕೃಷಿ ಚಟುವಟಿಕೆ ನಿಮಿತ್ತ ಓಡಾಡುವವರಿಗೆ ಅನುಮತಿ ನೀಡಲಾಗಿತ್ತು . ಅನಗತ್ಯ ಸಂಚಾರಕ್ಕೆ ನಿರ್ಬಂಧವಿತ್ತು. ಪೊಲೀಸರು ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಕಳಿಸುತ್ತಿದ್ದರು.