ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು ಶಾಖೆಯು ನಗರದ ಕೆ.ಜಿ. ರಸ್ತೆಯಲ್ಲಿರುವ ಎಫ್ ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸರಕು ಸೇವಾ ತೆರಿಗೆ (ಜಿಎಸ್ ಟಿ) ಕುರಿತ ರಾಷ್ಟ್ರೀಯ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಜಿಎಸ್ಟಿಯಲ್ಲಿ ಇತ್ತೀಚಿನ ತಿದ್ದುಪಡಿಗಳು ಮತ್ತು ನಿರಸ್ಣಾಯಕ ಪ್ರಾಯೋಗಿಕ ಸಮಸ್ಯೆಗಳು ಕುರಿತು ಸಮಾವೇಶ ಏರ್ಪಡಿಸಲಾಗಿತ್ತು.

ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐ.ಸಿ.ಎ.ಐ.) ಮಾಜಿ ಅಧ್ಯಕ್ಷ ಕೆ. ರಘು ಮಾತನಾಡಿ, “ಕೇಂದ್ರ ಸರಕಾರವು 2017ರ ಜುಲೈ 1ರಂದು ಒಂದು ರಾಷ್ಟ್ರ ಒಂದು ತೆರಿಗೆ ಪದ್ಧತಿಯನ್ನು ಪರಿಚಯಿಸಿತು. ಈ ಮೊದಲು ಬೇರೆ ಬೇರೆ ರೀತಿಯ ತೆರಿಗೆ ನೀತಿಗಳು ಜಾರಿಯಲ್ಲಿದ್ದವು. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆ ನೀತಿ ಜಾರೊಯಲ್ಲಿತ್ತು. ಇದರಿಂದ ಗ್ರಾಹಕರಿಗೆ ತೆರಿಗೆ ಪಾವತಿಸಲು ಕೂಡ ಸಮಸ್ಯೆಯಾಗುತ್ತಿತ್ತು. ಇದೀಗ ಆ ಸಮಸ್ಯೆಯಿಲ್ಲ. ಇದರಿಂದ ಸರಕಾರಕ್ಕೆ ಉತ್ತಮ ಆದಾಯ ಬರುತ್ತಿದೆ” ಎಂದರು.

ಇದೀಗ ಲೆಕ್ಕಪರಿಶೋಧಕರು ಒಟ್ಟುಗೂಡಿ ಇದರಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲಕರವಾದ ಅಂಶಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.

ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐ.ಸಿ.ಎ.ಐ.) ಭೋಜರಾಜ ಟಿ. ಶೆಟ್ಟಿ ಮಾತನಾಡಿ, ಪ್ರತಿ ವರ್ಷ ಸಿಎಸ್ಟಿ ಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇವುಗಳ ಬಗ್ಗೆ ಲೆಕ್ಕಪರಿಷೋಧಕರು ಕಾಲ ಕಾಲಕ್ಕೆ ತಿಳಿದು ಅದರ ಬಗ್ಗೆ ಗ್ರಾಹಕರಿಗೆ ತಿಳಿಸಲು ಇಂತಹ ಸಮಾವೇಶಗಳು ಅನುಕೂಲವಾಗಲಿವೆ ಎಂದರು.

ಕೋವಿಡ್ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಸಮಾವೇಷಶದಲ್ಲಿ ಭೌತಿಕವಾಗಿ ಭಾಗವಹಿಸುತ್ತಿರುವವರ ಸಂಖ್ಯೆ ಕಡಿಮೆಯಾದರೂ ಆನ್ ಲೈನ್ ಮೂಲಕ ಸಾಕಷ್ಟು ಮಂದಿ ಲೆಕ್ಕ ಪರಿಷೋಧಕರು ಭಾಗವಹಿಸಿ ಚರ್ಚಿಸುತ್ತಿದ್ದಾರೆ.
ಹೊಸದಿಲ್ಲಿಯ ಐಸಿಎಐ ಅಧ್ಯಕ್ಷ ನಿಹಾರ್ ಅಂಡ್ ಜಂಬು ಸಾರಿಯಾ ಅವರು ಆನ್ಲೈನ್ ಮೂಲಕ ಸಂದೇಶ ನೀಡಿದ್ದಾರೆ. ಮಾಜಿ ಅಧ್ಯಕ್ಷರಾದ ಕೆ ರಘು ಅವರು ಸಮಾವೇಶದಲ್ಲಿ ಭೌತಿಕವಾಗಿ ಭಾಗವಹಿಸಿದ್ದರು.

ಸಮಾವೇಶದಲ್ಲಿ ಜಿಎಸ್ಟಿ ಕುರಿತಾದ ಎಂಟು ತಾಂತ್ರಿಕ ಗೋಷ್ಟಿಗಳು ನಡೆಯಲಿವೆ.
ದಿವ್ಯಾ ಎಸ್., ವಿರಲ್ ಎಂ. ಕಂದಹಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…