ಶಿವಮೊಗ್ಗ: ಬೆಂಗಳೂರಿನ ಗ್ರೂಮಿಂಗ್ ಗುರುಕುಲ್ ವತಿಯಿಂದ ರಾಯಲ್ ಆರ್ಕೀಡ್ ಸೆಂಟರ್ ಹೋಟೆಲ್ನಿಲ್ಲಿ ಡಿ.18ರಂದು ಪುರುಷರು ಮತ್ತು ಮಹಿಳೆಯರಿಗಾಗಿ ಫ್ಯಾಷನ್ ಶೋ ಹಂಟ್ ಅಡಿಷನ್ ಬೆಳಿಗ್ಗೆ 10ಗಂಟೆಯಿಂದ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ನಿರಂಜನಿ ರವೀಂದ್ರ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ವಿಶೇಷವಾದ ಫ್ಯಾಷನ್ ಶೋನ ಆಯ್ಕೆ ಪ್ರಕ್ರಿಯೆವಾಗಿದೆ. ಡಿ.18ರಂದು ಬೆಳಿಗ್ಗೆ 10ಗಂಟೆಗೆ ಸ್ಥಳದಲ್ಲಿಯೇ ನೊಂದಣಿ ಕೂಡ ಆರಂಭವಾಗುತ್ತದೆ. 18ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಇದರಲ್ಲಿ ಭಾಗವಹಿಸಬಹುದಾಗಿದೆ. ಮಿಸ್ ಮಿಸಸ್ ಮತ್ತು ಮಿಸ್ಟರ್ ಶಿವಮೊಗ್ಗ ಈ 3 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 500 ರೂ. ಶುಲ್ಕ ನಿಗದಿಮಾಡಲಾಗಿದ್ದು, ಆಸಕ್ತರು ನಿಯಮಗಳಿಗೆ ಒಳಪಟ್ಟು ಇದರಲ್ಲಿ ಭಾಗವಹಿಸಬಹುದಾಗಿದೆ. ಮಿಸಸ್ ವಿಭಾಗದಲ್ಲಿ ಮದುವೆಯಾದವರಿಗೂ ಅವಕಾಶವಿದೆ ಎಂದರು.
ಈ ಮೇಗ ಅಡಿಷನ್ನಲಲ್ಲಿ ಆಯ್ಕೆಯಾದರು ಜನವರಿ ತಿಂಗಳಿನಲ್ಲಿಯೇ ಶಿವಮೊಗ್ಗಲ್ಲಿಯೇ ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಲು ಅವಕಾಶವಿದೆ. ಡಿ.18ರಂದು ನಡೆಯುವ ಅಡಿಷನ್ ಶೋದ ಉದ್ಘಾಟನೆಯನ್ನು ಧಾರವಾಯಿ ಖ್ಯಾತಿಯ ಹಾಗೂ ಮಿಸ್ಟರ್ ಇಂಡಿಯಾ ಫಸ್ಟ್ ರನ್ನರ್ ಆಪ್ ಆದ ಅಭಿನವ್ ವಿಶ್ವನಾಥನ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಗ್ರೋಮಿಂಗ್ ಸಂಸ್ಥೆಯ ಗೀತಾಶೆಟ್ಟಿ ಮತ್ತು ಪ್ರೀತಿರಾಜ್ ಕೂಡ ಇರುತ್ತಾರೆ. ಈ ಸದಾವಕಾಶವನ್ನು ಶಿವಮೊಗ್ಗದ ಪುರುಷರು, ಮಹಿಳೆಯರು, ಯುವತಿಯರು ಉಪಯೋಗಿಸಿಕೊಳ್ಳಬೇಕು ಎಂದು ಅವರು ಕೋರಿದರು.ಪತ್ರಿಕಾಗೋಷ್ಠಿಯಲ್ಲಿ ಸೋನಾಲಿ ನರೇಂದ್ರ, ಕ್ರಿಸ್ ಥಾಮಸ್ ಇದ್ದರು.