ಈ ದಿನವೂ ಕೂಡ ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ . ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ತೀವ್ರವಾದ ಕಟ್ಟೆಚ್ಚರ ವಹಿಸಲಾಗಿತ್ತು . ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಯಿತು . ಅನಗತ್ಯ ಸಂಚಾರ ಮಾಡಿದವರ ವಾಹನಗಳನ್ನು ಜಪ್ತಿ ಮಾಡಲಾಯಿತು. ಆಸ್ಪತ್ರೆಯ ನೆಪವೊಡ್ಡಿ ಪ್ರಯಾಣಿಸುತ್ತಿದ್ದವರು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದರು. ಆದ್ದರಿಂದ ಆಸ್ಪತ್ರೆ ನೆಪ ಹೇಳುವವರಿಗೆ ಕಡ್ಡಾಯವಾಗಿ ಈ ದಿನದ ಆಸ್ಪತ್ರೆಯ ಚೀಟಿಯನ್ನು ಪೊಲೀಸರು ನೋಡಿ ಸರಿ ಇದ್ದರೆ ಮಾತ್ರ ಅನುಮತಿ ನೀಡಿದರು.

ಈ ದಿನದ ಹೆಲ್ತ್ ಬುಲೆಟಿನ್
ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 39998
ಗುಣಮುಖವಾಗಿ ಬಿಡುಗಡೆ ಹೊಂದಿದವರ ಸಂಖ್ಯೆ 34752

ಶಿವಮೊಗ್ಗದಲ್ಲಿ ಒಟ್ಟು ಹೊಸ ಪ್ರಕರಣಗಳು 1067
ಗುಣಮುಖವಾಗಿ ಬಿಡುಗಡೆ ಹೊಂದಿದವರು 597
ಶಿವಮೊಗ್ಗದಲ್ಲಿ ಕೋವಿಡ ಯಿಂದ 26 ಜನ ಮೃತಪಟ್ಟಿದ್ದಾರೆ .
ಎಂದಿನಂತೆ ಇಂದು ಕೂಡ ಶಿವಮೊಗ್ಗ ನಗರದಲ್ಲಿ ಹಲವಾರು ಸಂಘಟನೆಗಳು ನಿರಾಶ್ರಿತರಿಗೆ ಊಟ ಹಾಗೂ ಔಷಧಿಗಳನ್ನು ವಿತರಿಸಿದರು .
ಆದಷ್ಟು ಮನೆಯಲ್ಲೇ ಇರಿ ಆರೋಗ್ಯವಾಗಿರಿ .

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ