ಬೆಂಗಳೂರು : ಸದಾ ವಿವಾದಗಳಿಂದಲೇ ಪ್ರಚಲಿತವಾಗಿರುವ ನಟ ಚೇತನ್ ಹಿಂಸೆ ವಿರುದ್ಧ ಬೆಂಗ್ಳೂರು ನಗರದ ಬಸವನಗುಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ . ಇತ್ತೀಚೆಗೆ ಚೇತನ್ ಅಹಿಂಸಾ ಅವರು ವಿಡಿಯೋವೊಂದನ್ನು ಮಾಡಿದ್ದು ಅದರಲ್ಲಿ ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ಶರ್ಮಾ ಬಸವನಗುಡಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಐಪಿಸಿ 129(ಎ ) – ಧಾರ್ಮಿಕ ಭಾವನೆ ಕೆರಳಿಸುವುದು ಹಾಗೂ ಐಪಿಸಿ 153(ಬಿ ) ದ್ವೇಷ ಭಾವನೆ ಹೆಚ್ಚಿಸುವುದು ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ..


ವರದಿ ಮಹೇಶ್ ಬೆಂಗಳೂರು

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153