ಶನಿವಾರ ನಗರಕ್ಕೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್ ಅವರು ಮೆಗಾನ್ ಆಡಳಿತ ಮಂಡಲಿಯ ಕಾರ್ಯವೈಖರಿ ಬಗ್ಗೆ ತುಸು ಅಸಮಾಧಾನ ವ್ಯಕ್ತಪಡಿಸಿದ್ದರು . ಇಂದು ಬೆಳಿಗ್ಗೆ ಕೋವಿಡ ಸೋಂಕಿತರ ಜೊತೆಯಲ್ಲಿದ್ದ ಸಂಬಂಧಿಕರನ್ನು ಆಸ್ಪತ್ರೆಯಿಂದ ಹೊರ ಕಳಿಸಿದ್ದಾರೆ. ವಿಡಿಯೋ ನೋಡಿ. ಈ ಸಂದರ್ಭದಲ್ಲಿ ಪೊಲೀಸರು ಜನರನ್ನು ಚದುರಿಸಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಶನಿವಾರ ನಡೆದ ಸಭೆಯಲ್ಲಿ ಸುಧಾಕರ್ ಅವರು ಈ ಬಗ್ಗೆ ಪ್ರಶ್ನಿಸಿದಾಗ ಸೋಂಕಿತರ ಜೊತೆ ಅವರ ಸಂಬಂಧಿಗಳಿಗೆ ಇರಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳಿದ್ದರು. ಇಂದು ಬೆಳಿಗ್ಗೆ ಅವರನ್ನು ಆಸ್ಪತ್ರೆಯಿಂದ ಹೊರ ಕಳಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ಪೊಲೀಸರಿಗೆ ವಾಗ್ವಾದ ಏರ್ಪಟ್ಟಿತು. ಪೋಲಿಸರು ಸೊಂಕಿತರ ಸಂಬಂಧಿಗಳನ್ನು ಒಲಿಸಲು ಹರಸಾಹಸ ಪಟ್ಟರು. ಹಾಗಾದರೆ SIMS ಆಡಳಿತ ಮಂಡಳಿ ತನ್ನ ವಿಫಲತೆಯನ್ನು ಮುಚ್ಚಿಟ್ಟು ಸಚಿವರಿಗೆ ಸುಳ್ಳು ಮಾಹಿತಿ ನೀಡಿತೇ?
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153