ಸರ್ಕಾರವು ಸರ್ಕಾರಿ ಅಧಿಕಾರಿಗಳಿಗೆ ಅನುಕೂಲವಾಗಲೆಂದು ಸರ್ಕಾರದ ವಾಹನಗಳನ್ನು ನೀಡಿರುತ್ತದೆ. ಸರಕಾರಕ್ಕೆ ಇಂತಹ ವಾಹನಗಳ ಡೀಸೆಲ್ ಹಾಗೂ ಮೆಂಟೆನೆನ್ಸ್ ವೆಚ್ಚವನ್ನು ಭರಿಸಲು ಬಹುಪಾಲು ಹಣ ವ್ಯಯವಾಗುತ್ತದೆ. ಏತನ್ಮಧ್ಯೆ ಕೆಲವು ಅಧಿಕಾರಿಗಳು ತಮ್ಮ ಸರ್ಕಾರಿ ವಾಹನವನ್ನು ಖಾಸಗಿ ಕೆಲಸಗಳಿಗೆ ಬಳಸುವ ಚಾಳಿಯನ್ನು ಇನ್ನೂ ಬಿಟ್ಟಿಲ್ಲ.
ಸಾವಿರಾರು ರೂಪಾಯಿ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ಸರ್ಕಾರಿ ವಾಹನವನ್ನು ತಮ್ಮ ಖಾಸಗಿ ಕೆಲಸಗಳಿಗೆ ಬಳಸುವುದು ನಿಜಕ್ಕೂ ಖೇದಕರ ಸಂಗತಿ. ಇಂದು ಶಿವಮೊಗ್ಗದ ಸಕ್ರೆಬೈಲಿನಲ್ಲಿ ಮದುವೆ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಮ್ಮ ಫ್ಯಾಮಿಲಿ ಸಮೇತ ಸರ್ಕಾರಿ ಜೀಪಿನಲ್ಲಿ ಬಂದಿದ್ದು ಇದರ ವಿಡಿಯೋ ಪ್ರಜಾಶಕ್ತಿ ತಂಡಕ್ಕೆ ದೊರೆತಿದೆ. ವಿಡಿಯೋ ನೋಡಿ
ಸಾವಿರಾರು ರೂಪಾಯಿ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ತಮ್ಮ ಸ್ವಂತ ಬುದ್ಧಿಯಿಂದ ಸರ್ಕಾರಿ ವಾಹನಗಳನ್ನು ಖಾಸಗಿ ಕೆಲಸಕ್ಕಾಗಿ ಬಳಸುವುದನ್ನು ನಿಲ್ಲಿಸಬೇಕು. ನೀವು ಸರ್ಕಾರಿ ವಾಹನವನ್ನು ಖಾಸಗಿ ಕೆಲಸಕ್ಕೆ ಬಳಸಿದಾಗ ಸರ್ಕಾರಕ್ಕೆ ನಷ್ಟವಾಗುವುದಲ್ಲದೆ. ಆ ಸಂದರ್ಭದಲ್ಲಿ ಸರ್ಕಾರಿ ಕೆಲಸಕ್ಕೆ ವಾಹನ ಸಿಗದೆ ಕೆಲಸ ವಿಳಂಬವಾಗುವುದರಲ್ಲಿ ಸಂದೇಹವಿಲ್ಲ . ಅರಣ್ಯ ಇಲಾಖೆಯಲ್ಲಿ ಎಷ್ಟೋ ಜನ ನಿಷ್ಠಾವಂತ ಅಧಿಕಾರಿಗಳಿದ್ದಾರೆ ಹಾಗೆ ನಿಷ್ಠಾವಂತ ಫಾರೆಸ್ಟ್ ಗಾರ್ಡ್ ಗಳು ಇದ್ದಾರೆ ಇವರೆಲ್ಲರ ಪರಿಶ್ರಮದಿಂದ ಮಲೆನಾಡಿನ ಪ್ರಕೃತಿ ಸಂಪತ್ತು ಇಂದಿಗೂ ಉಳಿದಿದೆ.
ಈ ಮಲೆನಾಡಿನ ಪ್ರಕೃತಿ ಸಂಪತ್ತನ್ನು ಕಾಪಾಡಲು ನಿಮಗೆ ಸರ್ಕಾರ ಕೊಟ್ಟಿರುವ ಜೀಪನ್ನು ಖಾಸಗಿ ಕೆಲಸಕ್ಕೆ ಉಪಯೋಗಿಸಿಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ.
ಅಧಿಕಾರಿಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ.
ಶಿವಮೊಗ್ಗ DFO ರವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಿಮ್ಮ ಅಧಿಕಾರಿ ವರ್ಗಕ್ಕೆ ವಿಷಯವನ್ನು ಮನವರಿಕೆ ಮಾಡಿಕೊಟ್ಟಲ್ಲಿ ಜನತೆಗೆ ಬಹು ದೊಡ್ಡ ಉಪಕಾರವಾಗುತ್ತದೆ.