ಹೆಣ್ಣು ಮಹಿಳೆಯರ ಉದ್ಯಮಕ್ಕೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಿ ಮಹಿಳೆಯರನ್ನು ಸ್ವಾವಲಂಬಿಯಾಗಿಸೋಣ. ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಸೌಲಭ್ಯ ಸಿಗದಿರುವ ಕಾರಣ ಮಹಿಳೆಯರು ತಮ್ಮ ಉದ್ಯೋಗದಲ್ಲಿ ಪ್ರಗತಿ ಕಾಣುತ್ತಿಲ್ಲ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮ ನಿಯಮಿತದ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ನುಡಿದರು. ಅವರು ಇಂದು ಬೆಳಿಗ್ಗೆ ಬಾಲರಾಜ್ ಅರಸ್ ರಸ್ತೆಯ ಪ್ರವಾಸಿ ಕಾರು ನಿಲ್ದಾಣದಲ್ಲಿ ಸ್ವೇದ ಸಂಸ್ಥೆ ಆಯೋಜಿಸಿದ ಸ್ವೇದ ಸಂತೆಯಲ್ಲಿ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಉದ್ಘಾಟನೆ ಮಾಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಸುನಿತಾ ಅಣ್ಣಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಹಿಳೆಯರು ಸ್ವಾವಲಂಬಿಗಳಾಗಬೇಕು . ಕೇವಲ ಅಧಸುಗೆ ಮನೆಗೆ ಸೀಮಿತವಾಗಬಾರದು. ಮಹಿಳೆಯರಿಗೆ ತಾವು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಕಷ್ಟು ಅವಕಾಶಗಳನ್ನು ಮಹಾನಗರ ಪಾಲಿಕೆಯಿಂದ ಇದಕ್ಕಾಗಿ ವಿಶೇಷ ಕಿಯೋಸ್ಕ (KIOSK) ಗಳನ್ನು ನಿರ್ಮಾಣ ಮಾಡಿ ಅವರ ಬೆಳವಣಿಗೆಗೆ ಸಹಕಾರ ನೀಡಲಾಗುವುದು. ಇಂತಹ ಸಂಸ್ಥೆಗಳು ಹೆಚ್ಚು ಹೆಚ್ಚು ಮಹಿಳಾ ಸಬಲೀಕರಣ ಬರೀ ಮಾತನಾಡದೆ ಕಾರ್ಯ ಪ್ರವೃತ್ತರಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಡಾ.ಲಕ್ಷ್ಮಿದೇವಿ ಗೋಪಿನಾಥ್ ರವರು ವಹಿಸಿ ಮಾತನಾಡುತ್ತಾ ಇಂದಿನ ಎಲ್ಲಾ ಮಹಿಳೆಯರು ಸೇರಿಕೊಂಡು ಮಹಿಳಾ ಉದ್ದಿಮೆದಾರರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಉದ್ದೇಶದಿಂದ ಇಸ್ರೋದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಬರುವ ದಿನಗಳಲ್ಲಿ ಇಂತಹ ಸಿದ್ಧ ಸೇವಾ ಸಂಸ್ಥೆಗಳು ಪ್ರತಿ ವಾರ ವಿವಿಧ ಬಡಾವಣೆಗಳಲ್ಲಿ ನಡೆಯಲು ಉದ್ದೇಶಿಸಲಾಗಿದೆ . ಉತ್ಪನ್ನ ತಯಾರಿಕೆಗೂ ಮಾರುಕಟ್ಟೆಗೂ ಅಂತರವಿದ್ದು ಅಂತರವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ರೀತಿಯ ಮಹಿಳಾ ಸ್ವೇದ ಗ್ರಂಥಿಗಳನ್ನು ಆಯೋಜನೆ ಮಾಡಿ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಇದಕ್ಕೆ ಶಿವಮೊಗ್ಗ ಜನತೆ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿಕೊಂಡರು. ಇದೇ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್ ಗೋಪಿನಾಥ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಮ್ಮ ಸಂಘದಿಂದ ಇಂತಹ ಉದ್ದಿಮೆದಾರರನ್ನು ಪ್ರೋತ್ಸಾಹಿಸಿ ಸಂಘ ಕಾರ್ಯ ನಿರಂತರವಾಗಿ ಮಾಡುತ್ತಾ ಬರುತ್ತಿರುವುದು ನಮ್ಮ ಸಹಕಾರ ನಿರಂತರವಾಗಿರುತ್ತದೆ ಎಂದು ನುಡಿದರು ಸಮಾರಂಭದಲ್ಲಿ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್ ನಿರ್ದೇಶಕರಾದ ನಿರಂಜಿನಿ ರವೀಂದ್ರ ಸಹನಾ ಚೇತನ್ ವಾಣಿಜ್ಯ ಸಂಘದ ಸಹಕಾರ್ಯದರ್ಶಿ ಜಿ ವಿಜಯಕುಮಾರ್ ಉಪಾಧ್ಯಕ್ಷ ಪಿ ಗೋಪಿನಾಥ್ ಸೋಕಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಎನ್ ವಿ ಭಟ್ ವೀರಣ್ಣ ಹುಗ್ಗಿ ಹಾಗೂ ಟ್ಯಾಕ್ಸಿ ಸ್ಟ್ಯಾಂಡ್ ಅಧ್ಯಕ್ಷರಾದ ಗಣೇಶ್ ಕಾರ್ಯದರ್ಶಿಗಳಾದ ರಾಘವೇಂದ್ರ ಜಿಲ್ಲಾ ಕೈಗಾರಿಕ ಸಂಸ್ಥೆಯ ಜಂಟಿ ನಿರ್ದೇಶಕರಾದಂತಹ ಗಣೇಶ್ ರವರು ಹಾಗೂ ಸಹ ನಿರ್ದೇಶಕರಾದ ವೀರೇಶ್ ನಾಯಕ್ ರವರು ಉಪಸ್ಥಿತರಿದ್ದರು.