ಶಿವಮೊಗ್ಗ ನಗರದ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಿ.ಎಸ್. ಅರುಣ್ ರವರಿಗೆ, ಬಿ.ಹೆಚ್.ರಸ್ತೆಯ ಸರ್ಕಾರಿ ಮೈನ್ ಮಿಡ್ಲ್ ಸ್ಕೂಲ್, ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಶಾಲೆಯ ಇತ್ತಿಚಿನ ಬೆಳವಣೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಈ ಶಾಲೆಗೆ 134 ವರ್ಷಗಳ ಇತಿಹಾಸವಿದೆ,
ಮಾಜಿ ಸಭಾಪತಿಗಳಾದ ಸನ್ಮಾನ್ಯ ಶ್ರೀ ಡಿ.ಹೆಚ್. ಶಂಕರಮೂರ್ತಿ ರವರು ಇದೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವರು, ಇದು ಕನ್ನಡ ಮಾಧ್ಯಮ ವಿರುವುದರಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಸರ್ಕಾರಿ ಶಾಲೆ ಉಳುವಿಗಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಡಿ ಯಲ್ಲಿ ‌ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಲು 13/03/2022 ರಂದು ತಮಗೆ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತ್ತು. ಅದಕ್ಕೆ ತಾವು ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಪತ್ರವ ಬರೆದಿರುವಿರಿ, ಆದರೆ ಇದುವರೆಗೂ ನಮಗೆ ಕೆಪಿಎಸ್ ಯ ಆದೇಶ ಪ್ರತಿ ದೊರೆತ್ತಿಲ್ಲ.

ಹಳೆ ವಿದ್ಯಾರ್ಥಿಗಳು, 1ರಿಂದ 5ನೇ ತರಗತಿ ಕನ್ನಡ ಮಾಧ್ಯಮ ಹಾಗೂ 6ಮತ್ತು 7ನೇ ತರಗತಿ ವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡೂ ಇದೆ ಎಂದು ಹಳೇ ವಿದ್ಯಾರ್ಥಿಗಳು ಮನೆ ಮನೆಗೆ ಮಕ್ಕಳ ಶಾಲೆಗೆ ಸೇರಿಸಲು ಆಂದೋಲನ ಹೋಗಿರುವೇವೂ ಬಹಳಷ್ಟು ಪೋಷಕರು ತಮ್ಮ ಮಕ್ಕಳಿಗೆ ಒಂದನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಸೇರಿಸಲು ಹೆಸರು ಬರಸಿರುವರು ಎಂದು ಎಂ.ಎಲ್.ಸಿ ರವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಸ್.ಅರುಣ್ ರವರು ತಾವು ಮನವಿ ನೀಡಿದ ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಪತ್ರ ಬರೆದಿರುವೆ, ಅವರು 150 ವಿದ್ಯಾರ್ಥಿಗಳ ದಾಖಲಾತಿ ಹೊಂದಿದ ಶಾಲೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿರುವರು, ಎಂದು ನಮಗೆ ತಿಳಿಸಿದರು, ಹಾಗೂ ನಮ್ಮ ತಂದೆಯೂ ಇದೆ ಶಾಲೆಯಲ್ಲಿ ಓದಿರುವರು ಹಾಗೂ ಬಹಳಷ್ಟು ಜನರು ಇದೆ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಇರುವರು, ಅವರು ಹಾಗೂ ನಾವು ಸದಾ ನಿಮ್ಮ ಹಳೆ ವಿದ್ಯಾರ್ಥಿಗಳ ಸಂಘದ ಜೋತೆ ಇರುತ್ತೇವೆ, ಶಾಲೆಗೆ ಬೇಕಾದ ಸಹಾಯವನ್ನು ಸಂಕೋಚ ವಿಲ್ಲದೆ ನಮ್ಮ ಗಮನಕ್ಕೆ ತಂದರೆ ಅದನ್ನು ಮಾಡಲು ನಾವು ಸಿದ್ಧ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಶ್ರೀ ಪರಶುರಾಮ, ಕಾರ್ಯದರ್ಶಿ ಶ್ರೀ ಮತಿ ಸವಿತಾ, ಖಜಾಂಚಿ ಶ್ರೀ ಪ್ರಕಾಶ್, ಸದಸ್ಯರಾದ ಶ್ರೀ ರಮೇಶ, ಶ್ರೀ ಅಣ್ಣಪ್ಪ, ಶ್ರೀ ಸುರೇಶ್, ಶ್ರೀ ಮತಿ ಅನುಪಮಾ ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…