ಶಿವಮೊಗ್ಗ: ಶುಭಶ್ರೀ ಸಮುದಾಯ ಭವನದಲ್ಲಿ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘ, ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ, ಶ್ರೀ ವಾಸವಿ ಚರಿತ್ರೆ ನಿತ್ಯ ಪಾರಾಯಣದ ಸಮಾರೋಪ ಸಮಾರಂಭ ಹಾಗೂ ವಾಸವಿ ಹೋಮ, ಗಿರಿಜಾ ಕಲ್ಯಾಣ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಭಾಗವಹಿಸಿ ಪೂಜೆ ಸಲ್ಲಿಸಿದರು.
ಹಿರಿಯರಾದ ಅಶ್ವತ್ಥನಾರಾಯಣ್ ಶೆಟ್ಟಿ, ಅಧ್ಯಕ್ಷ ದತ್ತಕುಮಾರ್, ನಿರ್ಮಿತಿ ನಾಗರಾಜ್, ಕಿರಣ್, ವಿಕ್ರಂ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.