ಕೇಂದ್ರೀಯ ಸೈನಿಕ ಮಂಡಳಿಯ ಜಾಲತಾಣ HTTPS://ONLINE.KSB.GOV.IN ದಲ್ಲಿ ಭಾರತೀಯ ಸೇನೆಯ ಜೆ.ಸಿ.ಓ ರ‍್ಯಾಂಕ್‌ವರೆಗಿನ ಅಥವಾ ವಾಯು ಸೇನೆ, ನೌಕಾ ಸೇನೆಯ ತತ್ಸಮಾನ ರ‍್ಯಾಂಕ್‌ವರೆಗಿನ ಮಾಜಿ ಸೈನಿಕರ ಮಕ್ಕಳು, ದ್ವಿತೀಯ ಪಿ.ಯು.ಸಿ ಯಲ್ಲಿ ಶೇ. 60 ಕ್ಕಿಂತ ಅಧಿಕ ಅಂಕಗಳನ್ನು ಪಡೆದು, ವೃತ್ತಿಪರ ಶಿಕ್ಷಣದಲ್ಲಿ ಪದವಿ ವ್ಯಾಸಂಗಕ್ಕಾಗಿ 2024-25ನೇ ಸಾಲಿನಲ್ಲಿ ಪ್ರವೇಶಾತಿ (ಅಡ್ಮಿಷನ್) ಪಡೆದಂತಹವರಿಂದ ಪ್ರಧಾನ ಮಂತ್ರಿ ಶಿಷ್ಯವೇತನ ಯೋಜನೆಯಡಿ (ಪ್ರಧಾನ ಮಂತ್ರಿ ಸ್ಕಾಲರ್ಷಿಪ್ ಸ್ಟೀಂ) ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಆಸಕ್ತರು ದಿ: 30/11/2024ರೊಳಗಾಗಿ ಅರ್ಜಿ ಸಲ್ಲಿಸುವಂತೆ ಹಾಗೂ ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಡಾ. ಸಿ.ಎ. ಹಿರೇಮಠರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಸೈನಿಕ ಮಂಡಳಿಯ ಜಾಲತಾಣ HTTPS://ONLINE.KSB.GOV.IN ಅಥವಾ ಇಲಾಖೆಯ ದೂ. ಸಂ.: 08182-220925 ನ್ನು ್ಲ ಸಂಪರ್ಕಿಸುವುದು.

ವರದಿ ಪ್ರಜಾ ಶಕ್ತಿ