“ಮಲೆನಾಡಿಗರ ಶತಮಾನಗಳ ಕನಸು – ವಿಶ್ವದರ್ಜೆಯ ಸೇತುವೆಯೊಂದಿಗೆ ನನಸು”
ಶರಾವತಿ ಹಿನ್ನೀರಿಗೆ ಸುಮಾರು 423.15 ಕೋಟಿ ವೆಚ್ಚದಲ್ಲಿ ಅಂಬಾರಗೋಡ್ಲು ಯಿಂದ ಕಳಸವಳ್ಳಿ ನಡುವೆ ನಿರ್ಮಾಣವಾಗುತ್ತಿರುವ 2.25ಕಿ.ಮೀ ಉದ್ದದ ಕೇಬಲ್ ಆಧಾರಿತ ಸಿಗಂದೂರು ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಸಂಸದ ಬಿ ವೈ ರಾಘವೇಂದ್ರ ಪರಿವೀಕ್ಷಣೆ ನಡೆಸಿದರು.
ಮಲೆನಾಡಿಗರ ಶತಮಾನಗಳ ಕಾತರತಗೆ ತೆರೆ ಬಿಳಲು ಕ್ಷಣಗಣನೆ ಆರಂಭವಾಗಿದೆ. ವಿಶ್ವದರ್ಜೆಯ ಸೇತುವೆ ನಿರ್ಮಾಣ ಮಾಡುವ ಮೂಲಕ ನಾಡಿಗೆ ಬೆಳಕು ನೀಡಿದವರ ಹಿತ ಕಾಯಲು ಬದ್ಧರಾಗಿದ್ದೇವೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು ದೊರಕಲಿದೆ ಎಂದರು.
ಇತಿಹಾಸ ಪ್ರಸಿದ್ಧ ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಸುಲಲಿತ ದರ್ಶನಕ್ಕೆ ಅನುಕೂಲವಾಗಲಿದೆ. ತುರ್ತು ಸಂದರ್ಭಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿದ್ದ ಭಯದ ವಾತಾವರಣ ದೂರವಾಗಲಿದೆ. ಒಂದು ರೀತಿಯ ಸಾರ್ಥಕ ಭಾವ ಮನೆ ಮಾಡಿದೆ ಎಂದರು.