
ಶಿವಮೊಗ್ಗ ನಗರದ ಡಿಪೋ ವೃತ್ತ, ದುರ್ಗಮ್ಮ ದೇವಸ್ಥಾನ ತುಂಗಾನಗರ, ವಿನೋಬನಗರ ಸೂಡ ಕಾಂಪ್ಲೆಕ್ಸ್, ರೈಲ್ವೆ ನಿಲ್ದಾಣ, ಪುರ್ಲೆ, ಕುಂಸಿ, ಮಹಾವೀರ ವೃತ್ತ, ಭದ್ರಾವತಿ ನಗರದ ಸಂಜಯ್ ಕಾಲೋನಿ, ನೆಹರು ನಗರ, ಹನುಮಂತ ನಗರ, ಸುರಗಿ ತೋಪು, ಹೊಸನಂಜಾಪುರ, ರಂಗಪ್ಪ ಸರ್ಕಲ್, ಹೊಳೆಹೊನ್ನೂರು, ತೀರ್ಥಹಳ್ಳಿ ಟೌನ್ ಬೆಟ್ಟ ಮಕ್ಕಿ, ಮಾಳೂರು, ಆಗುಂಬೆ, ನಗರ, ರಿಪ್ಪನ್ ಪೇಟೆ ವಿನಾಯಕ ವೃತ್ತ ಸಾಗರದ ಯಳವರಸೆ, ಜೋಗ ಜಲಪಾತ, ಸೊಬರ ಟೌನ್ ನಲ್ಲಿ , ಶಿವಮೊಗ್ಗ ಎ, ಶಿವಮೊಗ್ಗ ಬಿ, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿ ವಿಲೇಜ್ ಕ್ರೈಂ ಹಿಸ್ಟರಿ (VCH) ಭಾಗ 01 ರಿಂದ 07 ರವರೆಗೆ ವಿವರಿಸಿ, ಠಾಣಾ ಸಿಬ್ಬಂದಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಂಬಂದಪಟ್ಟ ಪೊಲೀಸ್ ನಿರೀಕ್ಷಕರು / ವೃತ್ತ ನಿರೀಕ್ಷಕರುಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಲಾಗಿರುತ್ತದೆ.