ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 4 ವಿಶೇಷ ಶಾಲೆಗಳು ಹಾಗೂ ಶಿಶುಕೇಂದ್ರಿಕೃತ ಯೋಜನೆಯಡಿ 3 ವಿಶೇಷ ಶಾಲೆಗಳಲ್ಲಿ ಪ್ರಸಕ್ತ ಸಾಲಿನ ಪ್ರವೇಶಾತಿ ಜೂ. 01 ರಿಂದ ಆರಂಭಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.


ಶ್ರವಣದೋಷವುಳ್ಳ ಮಕ್ಕಳಿಗೆ ಶಿವಮೊಗ್ಗ ಬಸವೇಶ್ವರನಗರ ಮತ್ತು ನ್ಯೂಟೌನ್, ಭದ್ರಾವತಿ ಶಿವಭದ್ರ ಟ್ರಸ್ಟ್, ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ವಸತಿ ಶಾಲೆ –ಮೊ.ಸಂ.: 9745883607 ಮತ್ತು 9972058025 ಹಾಗೂ ಭದ್ರಾವತಿ ತಾಲೂಕು, ಕವಲಗುಂದಿ ಅಂಚೆ, ಡೈರಿ ಸರ್ಕಲ್ ಹತ್ತಿರ ಶಾಂತಿನಿಕೇತನ ಚಾರಿಟಬಲ್ ಸೊಸೈಟಿ, ಮದರ್ ತೆರೆಸಾ ಕಿವುಡು ಮತ್ತು ಮೂಗ ಮಕ್ಕಳ ವಸತಿಯುತ ಶಾಲೆ-ಮೊ.ಸಂ.:8971604493/ 9148562414.


ದೃಷ್ಟಿದೋಷವುಳ್ಳ ಮಕ್ಕಳಿಗೆ ಶಿವಮೊಗ್ಗದ ಗೋಪಾಳ, ಅನುಪಿಕಟ್ಟೆ, ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರ, ಶ್ರೀ ಶಾರದಾದೇವಿ ಅಂಧರ ವಸತಿ ಶಾಲೆ- ಮೊ.ಸಂ.: 9972719596/ 9449401899.
ಬೌದ್ಧಿಕ ವಿಕಲತೆಯುಳ್ಳ ಮಕ್ಕಳಿಗೆ ಶಿವಮೊಗ್ಗದ ವಿದ್ಯಾನಗರದಲ್ಲಿರುವ ರೋಟರಿ 75 ವಾರ್ಷಿಕ ದತ್ತಿನಿಧಿ, ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ-ಮೊ.ಸಂ.:9945797120, ಸೊರಬ ತಾಲೂಕು ಕಾನಕೇರಿ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆ- ಮೊ.ಸಂ.: 9480466447/ 9449159963 ಹಾಗೂ ಸಾಗರ ತಾಲೂಕು ಮುಂಗರವಳ್ಳಿ ಚೈತನ್ಯ ಬುದ್ಧಿಮಾಂದ್ಯ ಮಕ್ಕಳ (ವಸತಿ ರಹಿತ) ವಿಶೇಷ ಶಾಲೆ – ಮೊ.ಸಂ.:9480504987/ 7676002490.
ಈ ಶಾಲೆಗಳಲ್ಲಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಊಟ, ವಸತಿ, ಸಮವಸ್ತç ಹಾಗೂ ಪುಸ್ತಕಗಳು ಸೇರಿ ಇತರೆ ಮೂಲ ಸೌಲಭ್ಯಗಳು ಸಂಪೂರ್ಣ ಉಚಿತವಾಗಿದ್ದು, ವಿಶೇಷ ಶಿಕ್ಷಣದಲ್ಲಿ ತರಬೇತಿ ಪಡೆದ ನುರಿತ ಅನುಭವಿ ಶಿಕ್ಷಕರಿಂದ ಮಕ್ಕಳಿಗೆ ವಿಶೇಷ ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು.

ಈ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತೊಬ್ಬರಿಗೆ ಹೊರೆಯಾಗದಂತೆ ಸ್ವಾವಲಂಬಿ ಬದುಕನ್ನು ನಡೆಸಲು ವಿಶೇಷ ಶಿಕ್ಷಣ ಪಡೆಯುವವರೊಂದಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮರ್ಥರಾಗುವಂತೆ ತರಬೇತಿ ನೀಡಲಾಗುವುದು.
ಆಸಕ್ತರು ಆಯಾ ವಿಶೇಷ ಶಾಲೆಯ ಮುಖ್ಯಸ್ಥರುಗಳ ಮೊ.ಸಂ.ಗಳನ್ನು ಅಥವಾ ಖುದ್ದಾಗಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸುವರ್ಣ ವಿ.ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Leave a Reply

Your email address will not be published. Required fields are marked *