ವಿನೋಬನಗರ ಪೊಲೀಸ್ ಚೌಕಿ ಕಡೆಗಳಲ್ಲಿ ದಿನೇ ದಿನೇ ವಾಹನ ಮತ್ತು ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ವಿನೋಬನಗರದ 2 ನೇ ಹಂತದ 2ನೇ ಮುಖ್ಯ ರಸ್ತೆ ಪೊಲೀಸ್‌ಚೌಕಿ ಕೆಳಭಾಗ ನಂದಿನಿ ಪಾರ್ಲರ್ ನಿಂದ ಮಾನಸ ಪೆಟ್ಸ್ ಮಾರ್ಟ್ ಶಾಪ್ ಕಡೆಗೆ ಹೋಗುವ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಿ, ಮಾನಸ ಪೆಟ್ಸ್ ಮಾರ್ಟ್ ಶಾಪ್ ನಿಂದ ನಂದಿನಿ ಪಾರ್ಲರ್ ಪೊಲೀಸ್ ಚೌಕಿ ಕಡೆಗೆ ಬರುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.