ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ, ಕೋಣಂದೂರು ಗ್ರಾಮ ವಾಸಿ ಕೆ.ಜೆ. ಉಮಾಕಾಂತ ಬಿನ್ ಗಂಗಪ್ಪ ಕೆ ಇವರು ಪರಿಶಿಷ್ಟ ಜಾತಿ “ಭೋವಿ” ಜಾತಿಯವರೆಂದು ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ತೀರ್ಥಹಳ್ಳಿ ತಾಲೂಕು ತಹಶೀಲ್ದಾರ್ ರಂಜಿತ್ ಎಸ್. ರವರು ರದ್ದುಪಡಿಸಿರುತ್ತಾರೆ.

ಅಡಿಷನಲ್ ಡೈರಕ್ಟರ್ ಜನರಲ್ ಆಫ್ ಪೊಲೀಸ್, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು ಇವರುಗಳ ವರದಿ ಮತ್ತು ವಿಚಾರಣೆಗಳನ್ನಾಧರಿಸಿ ಕೆ.ಜೆ. ಉಮಾಕಾಂತ ಪ್ರವರ್ಗ-1ರಲ್ಲಿ ಬರುವ ಬೋವಿ (ಒಕ್ಕಲಿಗ) ಜಾತಿಗೆ ಸೇರಿದವರೆಂದು ದೃಢಪಟ್ಟಿರುವುದರಿಂದ ಅವರು ಪಡೆದಿರುವ ಪರಿಶಿಷ್ಟ ಜಾತಿ ‘ಭೋವಿ’ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಲಾಗಿದೆ.

Leave a Reply

Your email address will not be published. Required fields are marked *