ಮಹಾನಗರ ಪಾಲಿಕೆಯ ವತಿಯಿಂದ ಆಹಾರ ತಯಾರಿಸುವ ಬೀದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ತರಬೇತಿ ಹಾಗೂ ಸ್ವನಿಧಿ ಮಿತ್ರ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಬೀದಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕ್ ವತಿಯಿಂದ ಸಾಲ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೌಶಲ್ಯ ಇಲಾಖೆಯ ಅಧಿಕಾರಿ ಶ್ರೀ ಸುರೇಶ್ ಪಾಲಿಕೆಯ ಅಧಿಕಾರಿ ಅನುಪಮಾ ಗೀತಾ ರೇಣು ಮತ್ತು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಹನುಮಂತ್ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಸೋಮೇಶ್ ಮತ್ತು ಬೀದಿ ವ್ಯಾಪಾರಿಗಳ ಸಮಿತಿಯ ಸದಸ್ಯರಾದ ಅಶೋಕ ಕುಮಾರ್, ನಾರಾಯಣ್, ಮೀನಾಕ್ಷಿ ಪಾಲಿಕೆಯ ಇತರೇ ಸಿಬ್ಬಂದಿಗಳು ಮತ್ತು ವಿವಿಧ ಬ್ಯಾಂಕ್ ಗಳ ವ್ಯವಸ್ತಾಪಕರು ಹಾಜರಿದ್ದರು.