ಮಂಡಗದ್ದೆ ವಲಯ, ಮಂಡಗದ್ದೆ ಶಾಖೆಯ ಕನಗಳಕೊಪ್ಪ ಗಸ್ತಿನ ರ ಮೇಲಿನ ಪತ್ರುವಳ್ಳಿ ಗ್ರಾಮದ ಸರ್ವೇ ನಂಬರ್ 06 ರಲ್ಲಿ 33.250 Kg ಶ್ರೀಗಂಧವನ್ನು ಸರ್ಕಾರದ ಪರ ವಶಪಡಿಸಿಕೊಂಡು, ಸತೀಶ್ ಬಿನ್ ನಂದಿ ಬಸವ ಕನಗಳಕೊಪ್ಪ ವಾಸಿ ಮತ್ತು ಪ್ರಕಾಶ್ ಬಿನ್ ಶೇಖರ್ ಕನಗಳಕೊಪ್ಪ ವಾಸಿ ಇಬ್ಬರನ್ನು ಬಂಧಿಸಿ ಅರಣ್ಯ ಮೊಕದ್ದಮೆ ಸಂಖ್ಯೆ 35/2025-26 ದಾಖಲಿಸಿರುತ್ತಾರೆ. ಸದರಿ ಕಾರ್ಯಾಚರಣೆಯಲ್ಲಿ ಶ್ರೀ ವಿನಯ ಕುಮಾರ್, ವಲಯ ಅರಣ್ಯಧಿಕಾರಿ, ಶ್ರೀ ಅಮಿತ್ ಉಪ ವಲಯ ಅರಣ್ಯಧಿಕಾರಿ, ಶ್ರೀ ಸಂತೋಷ್, ಕಿರಣ್ ಕುಮಾರ್ ಮತ್ತು ಮಹದೇವ್ ಗಸ್ತು ಅರಣ್ಯ ಪಾಲಕರು ಮತ್ತು ಶ್ರೀ ಅರುಣ್ ವಾಹನ ಚಾಲಕರ ಭಾಗವಹಿಸಿದ್ದರು.