ಶಿವಮೊಗ್ಗ ನಗರ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋಶಂಕರ ಲೇಔಟ್ ಒಳಗೆ ವ್ಯಕ್ತಿ ಮಾರುತಿ ಸ್ವಿಪ್ಟ್ ಸಿಲ್ವರ್ ಕಲರ್ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಇಲಾಖೆಯ ಮೇಲಾಧಿಕಾರಿಗಳ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರವಿ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನಾರಾಯಣ ಮಧುಗಿರಿ ಮತ್ತು ಸಿಬ್ಬಂದಿಗಳಾದ ಎಎಸ್‌ಐ ಚೂಡಾಮಣಿ ಕೆ. ಸಿಹೆಚ್‌ಸಿ ಗೋವರ್ದನ, ಸಿಹೆಚ್‌ಸಿ ಸಂದೀಪ ಎಸ್ ಡಿ., ಸಿಪಿಸಿ ಗುರುನಾಯ್ಕ, ಸಿಪಿಸಿ ಚಂದ್ರನಾಯ್ಕ. ಸಿಪಿಸಿ ಗಣೇಶ, ಸಿಪಿಸಿ ಪ್ರಶಾಂತ್ ಶೆಟ್ಟಣ್ಣನವರ್ ರವರುಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸ್ಥಳಕ್ಕೆ ಇಲಾಖೆಯ ಮೇಲಾಧಿಕಾರಿಗಳಾದ ಶ್ರೀ ಬಾಬು ಅಂಜನಪ್ಪ ಡಿವೈಎಸ್‌ಪಿ ಶಿವಮೊಗ್ಗ ನಗರ ಎ-ಉಪವಿಭಾಗ ಮತ್ತು SOCO ಅಧಿಕಾರಿಗಳೊಂದಿಗೆ ಆರೋಪಿತನಾದ ಮೊಹಮ್ಮದ್ ಅಲ್ತಾಪ್ ವಾಸ ಇಬ್ರಾಹಿಂ ಮಸೀದಿ ಹತ್ತಿರ ಅಣಲೆಕೊಪ್ಪ ಶಿರುವಾಳ ರಸ್ತೆ ಸಾಗರ ಟೌನ್ ಈತನನ್ನು ಹಿಡಿದು ಆತನು ಬಳಿ ಸ್ವಿಫ್ಟ್ ಸಿಲ್ವರ್ ಕಲರ್ ನಲ್ಲಿದ್ದ 04 ಕೆ.ಜಿ. 130 ಗ್ರಾಂ ತೂಕ ಇರುವ ಸುಮಾರು 2,00,000/-ರೂ ಬೆಳೆಬಾಳುವ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಸದರಿ ಆರೋಪಿತನ ವಿರುದ್ಧ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿರುತ್ತದೆ,