ಡಿ 15 ರಿಂದ ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಪ್ರತಿದಿನ ಬೆಳಿಗ್ಗೆ 6.45ಕ್ಕೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ವಿವಿಧ ವಿಷಯ ತಜ್ಞರಿಂದ ಹಲವು ರೋಗಗಳಿಗೆ ಸಂಬಂಧಿಸಿದಂತೆ 5 ನಿಮಿಷದ ಮಾಹಿತಿ “ಹೆಲ್ತ್ ಹಿಂಟ್ಸ್” ಎಂಬ ವಿಶೇಷ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಡಿ 16 ರಿಂದ ಪ್ರತೀ ಮಂಗಳವಾರ ಬೆಳಿಗ್ಗೆ 7.15ಕ್ಕೆ ಕಷ್ಟಕರ ಬದುಕಿನೊಂದಿಗೆ ಉನ್ನತ ಸ್ಥಾನಕ್ಕೇರಿದ ವಿವಿಧ ಸಾಧಕರನ್ನು ಪರಿಚಯಿಸುವ “ಬದುಕು ಜಟಕಾಬಂಡಿ” ಎಂಬ 15 ನಿಮಿಷದ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.