ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿ ಸದಸ್ಯರಾಗಿ ಸತತ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾದ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ, ಪಾಲಿಕೆ ಆಯುಕ್ತರ ಅಭಿನಂದನೆಗಳು
ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾನ್ಯ ಮಾಯಣ್ಣ ಗೌಡ ಕೆ. ರವರು ಅಭಿನಂದನೆಗಳು ಹೇಳುವುದರ ಮೂಲಕ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಐಡಿ ಕಾರ್ಡ್ ಹಾಕಿ ಶುಭ ಹಾರೈಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬೀದಿಬದಿ ವ್ಯಾಪಾರಿಗಳ ಪಟ್ಟಣ ಮಾರಾಟ ಸಮಿತಿಗೆ ಆಯ್ಕೆಯಾದ ಸದಸ್ಯರಿಗೆ ಆಯುಕ್ತರು ಅಭಿನಂದನೆಗಳು ಹೇಳಿ ಐಡಿ ಕಾರ್ಡ್ ವಿತರಣೆ ಮಾಡುವ ಮೂಲಕ ಶುಭ ಹಾರೈಸಿದರು.
ಶಿವಮೊಗ್ಗ ನಗರವು ಬೃಹತ್ಕಾರವಾಗಿ ಬೆಳೆಯುತ್ತಿದ್ದು ಜನಸಂಖ್ಯೆಯು ದುಪ್ಪಟ್ಟಗೊಳ್ಳುತ್ತಿದೆ, ಸಾರ್ವಜನಿಕರು ಒಡಾಡಲು ರಸ್ತೆಗಳು ಕಿರಿದಾಗಿದ್ದು, ಫುಟ್ ಪಾತ್ ಗಳು ಹಲವರಿಂದ ಆಕ್ರಮಿಸಿಕೊಳ್ಳಲಾಗಿದೆ, ಇದರಿಂದ ಸಾರ್ವಜನಿಕರು ಹಿರಿಯ ನಾಗರಿಕರು, ವೃದ್ಧರು, ಮಕ್ಕಳು ರಸ್ತೆಯಲ್ಲಿ ನಡೆದಾಡುವ ಪರಿಸ್ಥಿತಿ ಉಂಟಾಗಿದೆ, ಜನರು ಪುಟ್ ಪಾತ್ ಬಿಟ್ಟು ರಸ್ತೆಯಲ್ಲಿ ಓಡಾಟಗಳು ಹೆಚ್ಚಾಗುತ್ತಿದೆ ಇದರಿಂದ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದೆ.
ಫುಟ್ ಬಾತ್ ನಲ್ಲಿ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಿಗಳ ಸಂರಕ್ಷಣೆಗಳೊಂದಿಗೆ, ಪುಟ್ ಪಾತ್ ಕೇವಲ ಸಾರ್ವಜನಿಕ ಓಡಾಟಕ್ಕೆ ಮಾತ್ರ ಸೀಮಿತಗೊಳಿಸೋಣ, ಬಹಳಷ್ಟು ಪದವಿಗಳು ಪಡೆದು ಉದ್ಯೋಗವಿಲ್ಲದ ನಿರೋದ್ಯೋಗಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳ ಮೂಲಕ ನಿರೋದ್ಯೋಗ ಕಡಿಮೆ ಮಾಡಲು ಪ್ರಯತ್ನಿಸೋಣ.
ನಗರದ ಸೌಂದರ್ಯ ಕಾಪಾಡಲು ನಗರ ಸ್ಮಾರ್ಟ್ ಮಾಡಲು ಪ್ರಗತಿಪರ ಸಂಘಟನೆಗಳ ಮುಖಂಡರ ಸಲಹೆಗಳು ಹಾಗೂ ಹಲವು ಸಂಘ ಸಂಸ್ಥೆಗಳ ಮಾರ್ಗದರ್ಶನಗಳನ್ನು ಅಳವಡಿಸಿಕೊಂಡು ಸರಕಾರಿ ನೌಕರಿಗಳು ಪಡೆದ ಕುಟುಂಬ ಹಾಗೂ ಸರ್ಕಾರಕ್ಕೆ ಐಟಿ ರಿಟನ್ ಕಟ್ಟವವರನ್ನು ಹೊರತು ಪಡಿಸಿ, ಆರ್ಥಿಕ ದುರ್ಬಲ ವರ್ಗದ ವಿಧುವೆಯರು, ಅಂಗವಿಕಲರು, ನಿರೋದ್ಯೋಗಿ ಯುವಕ, ಯುವತಿಯರಿಗೆ ಪಾಲಿಕೆಯ ಸಿ ಆರ್ ಪಿ ಗಳ ಮೂಲಕ ಗುರುತಿಸಿ ಆಫ್ ಗಳಿಂದ ಅವರ ದಾಖಲೆಗಳನ್ನು ಪರಿಶೀಲನೆ ಮಾಡಿ, ಬೀದಿಬದಿ ವ್ಯಾಪಾರಿಗಳ ಗುರುತಿನ ಕಾರ್ಡ್ ನೀಡುವಂತೆಯಾಗಲಿ ಅವರು ಆಭಿವೃದ್ದಿ ಹೊಂದಿದ ಮೇಲೆ ಮೂರು ವರ್ಷಗಳ ನಂತರ ಮತ್ತೆ ಪರಶೀಲನೆ ಮಾಡಿ ಅವರಿಗೆ ಐಡಿ ಕಾರ್ಡ್ ರದ್ದುಗೊಳುವ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿ ಸದಸ್ಯರಾದ ಚನ್ನವೀರಪ್ಪ ಗಾಮನಗಟ್ಟಿ ರವರು ಹೇಳಿದರು.
ಈ ಸಂದರ್ಭದಲ್ಲಿ ಡೇ-ನಲ್ಮ್ ಸಮುದಾಯ ವ್ಯವಹಾರಿಕ ಅಧಿಕಾರಿ ಅನುಪಮಾ ಟಿ. ಆರ್, ಸಂಘಟನಾ ಅಧಿಕಾರಿಗಳು ಗೀತಾ, ರೇಣುಕಾ, ಪಾಲಿಕೆಯ ಅಕೌಂಟ್ಸ್ ಅಧಿಕಾರಿಗಳು ಸುರೇಶ್ ಪಟ್ಟಣ ಮಾರಾಟ ಸಮಿತಿ ಸದಸ್ಯರು ನಾರಯಣ ಎಂ ಎಸ್, ವಿನಯ್ ಕುಮಾರ್, ಶೇಷಯ್ಯ ಹಾಗೂ ಇತರರೂ ಉಪಸ್ಥತರಿದ್ದರು.