ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಹಲವು ದೂರು ಬಂದ ಹಿನ್ನೆಲೆಯಲ್ಲಿ ಸಂಚಾರಿ ವೃತ್ತ ನಿರೀಕ್ಷಕ ಟಿವಿ ದೇವರಾಜ್ ನೇತೃತ್ವದಲ್ಲಿ ಸಂಚಾರಿ ಪೊಲೀಸರ ತಂಡ ಮುಖ್ಯ ರಸ್ತೆಯಲ್ಲಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ.

ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಸಿಂಗರ್ ಶೋರೂಮ್ ವೃತ್ತದಿಂದ ಗೋಪಿ ವೃತ್ತದ ವರೆಗೆ ಏಕಮುಖ ಸಂಚಾರವಿದ್ದು ಬ್ಯಾರಿಕೇಡ್ ಹಾಕಿ ಫಲಕಗಳನ್ನು ಹಾಕಿದ್ದರು ಸಹ ನಿರಂತರವಾಗಿ ವಾಹನಸ್ವಾರರು ನಿಯಮ ಉಲ್ಲಂಘಿಸುತ್ತಿದ್ದು ಇನ್ನು ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಫುಟ್ಬಾತ್ ಮೇಲೆ ವ್ಯಾಪಾರಸ್ಥರು ಯಾವುದೇ ರೀತಿಯ ಅಧಿಕಾರ ಮಾಡುವ ಹಾಗಿಲ್ಲ. ತಮ್ಮ ಅಂಗಡಿಯ ಬೋರ್ಡ್ ಗಳನ್ನು ಬಿಡುವ ಹಾಗಿಲ್ಲ. ಹೂವು ಹಣ್ಣು ವ್ಯಾಪಾರಿಗಳು ಮನಬಂದಂತೆ ತಮ್ಮ ಗಾಡಿಗಳನ್ನು ಶಾಶ್ವತವಾಗಿ ನಿಲ್ಲಿಸುತ್ತಿದ್ದು ಅದಕ್ಕೆ ಅವಕಾಶವಿಲ್ಲ.

ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ತಳ್ಳುವ ಗಾಡಿಗಳಿಗೆ ಶಾಶ್ವತವಾಗಿ ನಿಲ್ಲಲು ಅವಕಾಶವಿಲ್ಲ ಎಂದು ಟ್ರಾಫಿಕ್ ನಿರೀಕ್ಷಕರು ತಿಳಿಸಿದ್ದಾರೆ. ಅಲ್ಲದೆ ಆಟೋ ಚಾಲಕರು ಕೂಡ ಮನಬಂದಂತೆ ಆಟೋಗಳನ್ನು ನಿಲ್ಲಿಸುತ್ತಿದ್ದು ಅವರು ನಿಗದಿತ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು. ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ವ್ಯಾಪಾರಸ್ಥರು ಕೂಡ ಅದನ್ನು ಪಾಲಿಸಬೇಕು. ಅಲ್ಲದೆ ಕನ್ಸರ್ವನ್ಸಿಗಳನ್ನು ತಮ್ಮ ದ್ವಿಚಕ್ರ ವಾಹನಗಳು ನಿಲುಗಡೆಗೆ ಬಳಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಆದರೆ ವಿಪರ್ಯಾಸವೆಂದರೆ ಸಂಚಾರಿ ಪೊಲೀಸರು ಪುಟ್ ಬಾತ್ ಮೇಲಿದ್ದ ಬೋರ್ಡ್ ಗಳನ್ನು ತೆರವುಗೊಳಿಸಿ ಎಚ್ಚರಿಕೆ ನೀಡಿ ಕೆಲವೇ ಕ್ಷಣಗಳಲ್ಲಿ ಮತ್ತೆ ಎಂದಿನಂತೆ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಂದ ನಿಯಮಗಳು ಉಲ್ಲಂಘನೆ ಯಥಾಪ್ರಕಾರ ಮುಂದುವರೆದಿದೆ.

Leave a Reply

Your email address will not be published. Required fields are marked *