ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ಎಂ ಶ್ರೀಕಾಂತ್ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಎಂ ಶ್ರೀಕಾಂತ್ ರವರ ಹುಟ್ಟುಹಬ್ಬ ಅಂಗವಾಗಿ ಅಭಿಮಾನಿಗಳಿಂದ ಶರಾವತಿ ನಗರದ ಶ್ರೀ ಕಾಲಭೈರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಭಕ್ತರಿಗೆ ವಿಶೇಷ ತಿರುಪತಿ ಲಡ್ಡು ವಿತರಿಸಿದರು.ಮತ್ತೊಂದೆಡೆ ಕಾರ್ಯಕರ್ತರಿಂದ ಬೃಹತ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ 100ಕೂ ಹೆಚ್ಚು ಕಾರ್ಯಕರ್ತರು ರಕ್ತದಾನವನ್ನು ಮಾಡಿದರು. ಇನ್ನೊಂದೆಡೆ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಅಭಿಮಾನಿಗಳು ಸ್ನೇಹಿತರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.