ಮಂಜುನಾಥ್ ಶೆಟ್ಟಿ…

ನಗರದ ವೀರಭದ್ರ ಚಿತ್ರಮಂದಿರ ರಸ್ತೆಯ ಮೇಲೆ ನಿಲ್ಲಿಸಿ ಲೋಡು ಅನ್ ಲೋಡ್ ಮಾಡುತ್ತಿದ್ದ ಈಸ್ಟ್ ವೆಸ್ಟ್ ಟೂರಿಸ್ಟ್ ಸಂಸ್ಥೆಗೆ ಬಸ್ಸನ್ನು ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ಟಿವಿ ರವರು ಠಾಣೆಗೆ ಕರೆಯಿಸಿ ದಂಡ ಹಾಕುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ವಕ್ಫ್ ಬೋರ್ಡ್ ಗೆ ಸೇರಿದ ಸಂಕೀರ್ಣದಲ್ಲಿರುವ ಈಸ್ ವೆಸ್ಟ್ ಸಂಸ್ಥೆಯ ಬಸ್ ಗಳು ಮುಂಬೈ, ಬೆಂಗಳೂರು ಹೀಗೆ ಇತರೆ ರಾಜ್ಯಗಳಿಗೆ ಸಂಚರಿಸುತ್ತಿವೆ. ಬಹುತೇಕ ಖಾಸಗಿ ಬಸ್ ಗಳಿಗೆ ಪ್ಯಾಸೇಂಜರ್ ಗಿಂತ ಲಗೇಜ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಸಂಸ್ಥೆಯು ಸಹ ಇದರಿಂದ ಹೊರತೇನಲ್ಲ. ಆದರೆ ಈ ಸಂಸ್ಥೆಯ ವಾಹನಗಳು ಬಹುತೇಕ ಲೋಡು ಅನ್ ಲೋಡ್ ಗಳನ್ನ ರಸ್ತೆಯ ಮೇಲೆ ಮಾಡುವುದರಿಂದ ವಾಹನ ಸಂಚಾರಕ್ಕೆ ಸುಮಾರು ವರ್ಷಗಳಿಂದ ದಿನಕ್ಕೆ ಕಿರಿಕಿರಿ ಉಂಟಾಗುತ್ತಿದ್ದವು.

ಈ ವಿಷಯದ ಬಗ್ಗೆ ಈ ಹಿಂದೆ ಹಲವು ಸಂಘಗಳು ದೂರು ನೀಡಿದ್ದವು. ಆದರೂ ಈಸ್ಟ್ ವೆಸ್ಟ್ ಬಸ್ ಗಳನ್ನ ರಸ್ತೆಗೆ ನಿಲ್ಲಿಸಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಿ ಎಂದು ದೂರು ನೀಡಿದಾಗಲೂ ಯಾವ ಜಿಲ್ಲಾಡಳಿತವೂ ತಲೆಕೆಡೆಸಿಕೊಂಡಿರಲಿಲ್ಲ. ಆದರೆ ಇಂದು ಈ ಸಂಸ್ಥೆಗೆ ಎಚ್ಚರಿಕೆ ನೀಡಲು ಮೂಹೂರ್ತ ಕೂಡಿ ಬಂದಿದೆ. ಸಿಪಿಐ ದೇವರಾಜ್ ಡಿವಿಎಸ್ ಆರ್ಟ್ಸ್ ಕಾಲೇಜು ಮುಂಭಾಗ ಈಸ್ಟ್ ವೆಸ್ಟ್ ಸಂಸ್ಥೆಯ ಬಸ್ ನ್ನ ನಿಲ್ಲಿಸಿಕೊಂಡಿದ್ದನ್ನ ಗಮನಿಸಿ ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ ಕರೆಯಿಸಿದ್ದಾರೆ.

ವಾಹನ ಸಮೇತ ಠಾಣೆಗೆ ತಂದು ನಿಲ್ಲಿಸಿ ಒಂದು ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ವಿಧಿಸಿ ಇನ್ನು ಮುಂದೆ ರಸ್ತೆಯ ಮೇಲೆ ಬಸ್ ಗಳನ್ನ ಪಾರ್ಕ್ ಮಾಡಿದರೆ ಅಥವಾ ಲೋಡ್ ಅನ್ ಲೋಡ್ ಮಾಡಿದರೆ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಇದರಿಂದ ದೇವರಾಜ್ ಅವರ ಕಾರ್ಯವನ್ನು ನೋಡಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *