ಮಂಜುನಾಥ್ ಶೆಟ್ಟಿ…


ಕೇಂದ್ರ ಸರ್ಕಾರವನ್ನು ಓಜಗೊಳಿಸುವಂತೆಾಗ್ರಹಿಸಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.ರಾಜಸ್ಥಾನ್‌ ಮತ್ತು ಉತ್ತರಾಖಾಂಡ್‌ನಲ್ಲಿ ನಡೆದ NEET-UG 2026 ಪರೀಕ್ಷೆಯ ಕುರಿತು ಕೇಳಿಬಂದಿರುವ ಪ್ರಶ್ನೆ ಪತ್ರಿಕೆ ಸೋರಿಕೆಯ ವದಂತಿದೆ ಪುಷ್ಠಿ ಕೊಡುವಂತೆ 03 ಮೇ 2026ರಂದು ನಡೆದ ಪರೀಕ್ಷೆಯ ಅಕ್ರಮಗಳ ಆರೋಪಗಳು ಸರಿಯಾಗಿವೇ ಎಂಬಂತೆ ಮತ್ತು ಪಾರದರ್ಶಕತೆ ಕಾಪಾಡಲು ವಿಫಲವಾಗಿದೆ ಎಂದು ಒಪ್ಪಿ, ಪರೀಕ್ಷೇಯನ್ನೇ ರದ್ದು ಮಾಡಿದ ಕೇಂದ್ರ ಬಿಜೆಪಿ ಸರ್ಕಾರ.

ಗ್ರಾಮೀಣ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಆರ್ಥಿಕ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸಕ್ಕಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸು ಕಂಡು ಅನೇಕ ವರ್ಷಗಳ ಕಾಲ ಹಗಲು-ರಾತ್ರಿ ಪರಿಶ್ರಮಪಡುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನಲ್ಲದೇ ಪೋಷಕರ ನಂಬಿಕೆ ಮತ್ತು ವಿಶ್ವಾಸವನ್ನೇ ಹಾಳು ಮಾಡಿದ ಕೇಂದ್ರ ಬಿಜೆಪಿ ಸರ್ಕಾರ. ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಪದೇ ಪದೇ ಸೋರಿಕೆಯಾಗುತ್ತಿರುವುದನ್ನು ಶಿವಮೊಗ್ಗ ಜಿಲ್ಲಾ NSUI ಖಂಡಿಸುತ್ತದೆ ಮತ್ತು ರಾಜಸ್ಥಾನದ ಯುವ ಮೋರ್ಚಾ ಕಾರ್ಯಕರ್ತನ ಮೂಲಕವೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಶೋಚನಿಯ ಎಂದರು.

NEET ವ್ಯವಸ್ಥೆಯನ್ನು ದೇಶದಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶದಲ್ಲಿ ಪಾರದರ್ಶಕತೆ, ಸಮಾನ ಅವಕಾಶ ಹಾಗೂ merit ಆಧಾರಿತ ಪ್ರವೇಶ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮಾನ್ಯ ಮನಮೋಹನ್‌ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 2012ರಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆದರೆ ಇಂದು ಅದೇ ವ್ಯವಸ್ಥೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, coaching mafia, ಪರೀಕ್ಷಾ ಅಕ್ರಮ ಮತ್ತು ಹಣದ ಪ್ರಭಾವದಿಂದ ತನ್ನ ಮೂಲ ಉದ್ದೇಶವನ್ನೇ ಕಳೆದುಕೊಳ್ಳುತ್ತಿರುವಂತಾಗಿದೆ. 2024ರಲ್ಲಿಯೂ NEET UG ಕುರಿತು ಪ್ರಶ್ನೆ ಪತ್ರಿಕೆ ವಿವಾದ ದೇಶಾದ್ಯಂತ ಕೇಳಿಬಂದಿದ್ದರೂ ಸಹ ಈ ವಿಷಯನ್ನು ಕೇಂದ್ರ ಸರ್ಕಾರ ಮುಚ್ಚಿಹಾಕಿತು.

ಆದರೂ ವಿದ್ಯಾರ್ಥಿಗಳಲ್ಲಿ ಈವರಗೂ ಸಂಪೂರ್ಣ ವಿಶ್ವಾಸ ಮರುಸ್ಥಾಪನೆಯಾಗಿಲ್ಲ. ರಾಷ್ಟ್ರಮಟ್ಟದ ಪರೀಕ್ಷೆಯ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಬೇಜಾವಬ್ದಾರಿ ಕೇಂದ್ರ ಸರ್ಕಾರವನ್ನು ಈ ಕೂಡಲೇ ವಜಾಗೊಳಿಸಿ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡುವಂತೆ ಮಾಡಲು ಈ ಮೂಲಕ ಗೌರವಪೂರ್ವಕವಾಗಿ ಕೋರಿ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ 2026ರ ನೀಟ್ ಪ್ರಶ್ನೆ ಪತ್ರಿಕೆಯನ್ನು ಹರಿದು ಹಾಕುವ ಮುಖಾಂತರ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ NSUI ನ ಜಿಲ್ಲಾಧ್ಯಕ್ಷ ವಿಜಯಕುಮಾರ್ ಕಾರ್ಯಧ್ಯಕ್ಷ ರವಿ ಕಾಟಿಕೆರೆ ನಗರಧ್ಯಕ್ಷ ರವಿಕುಮಾರ್ ಪ್ರಮುಖರಾದ ಚಂದ್ರೋಜಿ ರಾವ್, ಆದಿತ್ಯ, ಸುಭಾನ್,ವರುಣ್,ಅಭಿಷೇಕ್, ಯೂಸಫ್, ಅಲಾನ್, ಆಕಾಶ್, ಹಾಲಸ್ವಾಮಿ, ಶಂಕರ್, ಶ್ರೀಕಾಂತ್, ಸೃಜನ್, ಲೋಹಿತ್

Leave a Reply

Your email address will not be published. Required fields are marked *