ಮಂಜುನಾಥ್ ಶೆಟ್ಟಿ…

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಅಳವಡಿಸಿಕೊಂಡಿರುವ ವಸ್ತ್ರ ಸಂಹಿತೆಗೆ ಅನುಗುಣವಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡರಾವ್ ಶಾಸಕ ರಿಜ್ವಾನ್ ಹರ್ಷದ್ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ವಿಷಯ ತಿಳಿಸಿದರು.

​ಬೆಂಗಳೂರು: ರಾಜ್ಯದ ಶಾಲೆ ಮತ್ತು ಕಾಲೇಜುಗಳಲ್ಲಿ ಏಕರೂಪತೆ ಹಾಗೂ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ, 2022ರಲ್ಲಿ ಹೊರಡಿಸಲಾಗಿದ್ದ ವಿವಾದಿತ ಸಮವಸ್ತ್ರ ಆದೇಶವನ್ನು ಹಿಂಪಡೆದು ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಹೊಸ ಆದೇಶದ ಪ್ರಮುಖ ಅಂಶಗಳು…

​ಹಳೆಯ ಆದೇಶ ವಾಪಸ್: ಫೆಬ್ರವರಿ 5, 2022 ರಂದು ಹೊರಡಿಸಲಾಗಿದ್ದ ಸಮವಸ್ತ್ರಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ ಸಂಖ್ಯೆ: ಇಪಿ 14 ಎಸ್‌ಹೆಚ್‌ಹೆಚ್ 2022 ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

​ಸಾಂಪ್ರದಾಯಿಕ ಗುರುತುಗಳಿಗೆ ಅನುಮತಿ: ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರದ ಜೊತೆಗೆ ಸೀಮಿತ ಸಾಂಪ್ರದಾಯಿಕ ಹಾಗೂ ನಂಬಿಕೆ ಆಧಾರಿತ paಸಂಕೇತಗಳನ್ನು ಧರಿಸಲು ಸರ್ಕಾರ ಅವಕಾಶ ನೀಡಿದೆ.
​ಇವುಗಳಲ್ಲಿ ಪೇಟ (Turbon), ಜನಿವಾರ, ಶಿವದಾರ, ರುದ್ರಾಕ್ಷಿ ಮತ್ತು ತಲೆವಸ್ತ್ರ/ಹಿಜಾಬ್ (Headscarf) ಅಥವಾ ಇತರೆ ಸಮಾನ ಸ್ವರೂಪದ ಸಂಕೇತಗಳು ಸೇರಿವೆ.

ನಿಬಂಧನೆಗಳು…

ಈ ಸಾಂಪ್ರದಾಯಿಕ ಗುರುತುಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಮತ್ತು ಶಿಸ್ತು, ಸುರಕ್ಷತೆ ಅಥವಾ ವಿದ್ಯಾರ್ಥಿಯ ಗುರುತಿಸುವಿಕೆಗೆ ಯಾವುದೇ ಅಡ್ಡಿ ಉಂಟುಮಾಡಬಾರದು.

ಶಿಕ್ಷಣದ ಹಕ್ಕು…

ಯಾವುದೇ ವಿದ್ಯಾರ್ಥಿಯು ಇಂತಹ ಸಂಕೇತಗಳನ್ನು ಧರಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ.


ಬಲವಂತಕ್ಕೆ ತಡೆ…

ಸಾಂಪ್ರದಾಯಿಕ ಸಂಕೇತಗಳನ್ನು ಧರಿಸುವಂತೆ ಅಥವಾ ಧರಿಸಿರುವ ಸಂಕೇತಗಳನ್ನು ಬಲವಂತವಾಗಿ ತೆಗೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುವಂತಿಲ್ಲ.


ಸರ್ಕಾರದ ನಿಲುವು ಮತ್ತು ಆಶಯ…


ಜಾತ್ಯತೀತತೆ ಎಂದರೆ ವೈಯಕ್ತಿಕ ನಂಬಿಕೆಗಳ ವಿರೋಧವಲ್ಲ, ಬದಲಾಗಿ ಎಲ್ಲರಿಗೂ ಸಮಾನ ಗೌರವ ನೀಡುವುದಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಶಿಕ್ಷಣ ಸಂಸ್ಥೆಗಳು ಬಸವಣ್ಣನವರ “ಇವ ನಮ್ಮವ” ಎಂಬ ಒಳಗೊಳ್ಳುವಿಕೆಯ ತತ್ವವನ್ನು ಅಳವಡಿಸಿಕೊಳ್ಳಬೇಕು ಮತ್ತು ಯಾವುದೇ ವಿದ್ಯಾರ್ಥಿ ತಾರತಮ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಈ ಆದೇಶವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸಲಿದ್ದು, ಶಾಲಾ ಅಭಿವೃದ್ಧಿ ಸಮಿತಿಗಳು (SDMC) ಮತ್ತು ಕಾಲೇಜು ಅಭಿವೃದ್ಧಿ ಸಮಿತಿಗಳು (CDC) ಇದರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕಿದೆ. ನಿಯಮ ಉಲ್ಲಂಘಿಸುವ ಯಾವುದೇ ಹಳೆಯ ಸುತ್ತೋಲೆ ಅಥವಾ ಸೂಚನೆಗಳು ಇಂದಿನಿಂದ ಅನೂರ್ಜಿತಗೊಳ್ಳಲಿವೆ.

Leave a Reply

Your email address will not be published. Required fields are marked *