ಮಂಜುನಾಥ್ ಶೆಟ್ಟಿ…
ನಗರದ ವಾರ್ಡ್ ಸಂಖ್ಯೆ ೨೭ರ ಮಿಳಘಟ್ಟದ ೧ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಹಲವಾರು ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಶಾಸಕ ಚನ್ನಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಸಂಕಷ್ಟಕ್ಕೊಳಗಾಗಿರುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರು.
ಅವಘಡದ ತೀವ್ರತೆಯನ್ನು ಗಮನಿಸಿ, ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸಿಗಬೇಕಾದ ನಿಯಮಾನುಸಾರ ಗರಿಷ್ಠ ಪರಿಹಾರವನ್ನು ಹಾಗೂ ಅಗತ್ಯ ನೆರವನ್ನು ವಿಳಂಬವಿಲ್ಲದೆ ತಕ್ಷಣವೇ ತಲುಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಮಾಜಿ ಕಾರ್ಪೊರೇಟರ್ ವಿಶ್ವನಾಥ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ಟಿ ಆರ್ , ವಾರ್ಡ್ ಅಧ್ಯಕ್ಷ ರಮೇಶ, ಪ್ರಧಾನ ಕಾರ್ಯದರ್ಶಿ,ಶಿವಾಜಿ ಶಕ್ತಿಕೇಂದ್ರ ಪ್ರಮುಖ್ ಸೇಲ್ವ, ಷಣ್ಮುಗಂ ಬೂತ್ ಅಧ್ಯಕ್ಷ ಪ್ರಸನ್ನ, ಸ್ಥಳೀಯ ಪ್ರಮುಖರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.