ಮಂಜುನಾಥ ಶೆಟ್ಟಿ…
ಇತ್ತೀಚೆಗೆ ದೈವ ಧೀನರಾದ ಶ್ರೇಷ್ಠ ಗಾಯಕಿ ಎಸ್ ಜಾನಕಿ ಅವರಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಈ ಶ್ರದ್ಧಾಂಜಲಿಯ ನೇತೃತ್ವವನ್ನು ವಹಿಸಿ ಅತ್ಯಂತ ಭಾವಪೂರ್ಣವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಚಿರಂತನ ಯೋಗ ಮತ್ತು ಸಂಗೀತ ಕೇಂದ್ರದ ಮತ್ತು ಜಿಲ್ಲಾ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷೆ ಶಾಂತ ಶೆಟ್ಟಿ ಅವರು ಎಲ್ಲರಿಂದ ಶ್ಲಾಘನೆಗೆ ಒಳಗಾದರು.
ಎಸ್ ಜಾನಕಮ್ಮನವರು ಹಾಡಿರುವ 88 ಹಾಡುಗಳ ಪಲ್ಲವಿಯನ್ನು ಹಾಡಿ ಅಲ್ಲಿ ಸೇರಿದ್ದ ನೂರಾರು ಕಲಾವಿದರ ಮೂಲಕ ಹಾಡಿಸಿ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಹಲವಾರು ಕಡೆಯಿಂದ ಆಗಮಿಸಿದ ಸುಮಾರು 150 ಜನ ಸಂಗೀತ ಕಲಾವಿದರು ಮತ್ತು ಅಭಿಮಾನಿಗಳು ಪಾಲ್ಗೊಂಡು ಪಾವನವಾದರು.
ಈ ಕಾರ್ಯಕ್ರಮವನ್ನು ಜಿಲ್ಲಾ ಸುಗಮ ಸಂಗೀತ ಅಕಾಡೆಮಿ ಮತ್ತು ಚಿರಂತನ ಯೋಗ ಮತ್ತು ಸಂಗೀತ ಕೇಂದ್ರದವರು ಏರ್ಪಡಿಸಿದ್ದರು. ಶ್ರೀಮತಿ ಶಾಂತಾ ಶೆಟ್ಟಿಯವರು ಸುಮಾರು ಒಂದುವರೆ ಗಂಟೆಗಳ ಕಾಲ ಎಸ್ ಜಾನಕಮ್ಮನವರ ಜನಪ್ರಿಯ ಹಾಡುಗಳನ್ನು ಹಾಡಿ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಖಜಾಂಚಿ ಜಿ ವಿಜಯಕುಮಾರ್ ಎಲ್ಲರನ್ನು ಸ್ವಾಗತಿಸಿ ವಂದಿಸಿದರು ಹೊಸನಗರದ ಕಲಾವಿದ ಸುರೇಶ್ ಅವರು ಸಹ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಮಥುರಾ ಪ್ಯಾರಡೈಸ್ ಆವರಣದಲ್ಲಿ ಆಯೋಜಿಸಿದ್ದ ಈ ವಿಶಿಷ್ಟ ಕಾರ್ಯಕ್ರಮ ದಲ್ಲಿ ಮಾತನಾಡಿದ ಶಾಂತ ಶೆಟ್ಟಿಯವರು, ತಮ್ಮ ಮತ್ತು ಜಾನಕಿ ಅವರ ಒಡನೆ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ತಾವು ಕಂಡ ಮಹಾನ್ ಕಲಾವಿದರಲ್ಲಿ ಅತ್ಯಂತ ಹೆಚ್ಚು ಗೌರವಕ್ಕೆ ಪಾತ್ರರಾದವರು ಅವರಾಗಿದ್ದರು ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಥುರಾ ನಾಗರಾಜ್ ಮುಂದಿನ ದಿನಗಳಲ್ಲಿ ಎಸ್,ಜಾನಕಮ್ಮನವರ ಕುರಿತು ಸ್ವತಂತ್ರವಾದ ಒಂದು ಕಾರ್ಯಕ್ರಮವನ್ನು ಏರ್ಪಡಿಸುವುದಾಗಿ ತಿಳಿಸಿದರು.
ಲೇಖಕ ಎಂ.ಎನ್. ಸುಂದರ ರಾಜ್ ಮಾತನಾಡಿ, ಜಾನಕಿ ಅಮ್ಮನವರು ಅದೆಷ್ಟೇ ಎತ್ತರಕ್ಕೆ ಬೆಳೆದರೂ ಸಹ ಸರಳತೆಯೇ ಸಾಕಾರ ಮೂರ್ತಿಯಾಗಿದ್ದರು ಎಂದು ವರ್ಣಿಸಿದರು. ಖ್ಯಾತ ಗಾಯಕಿ ಸುರೇಖಾ ಅವರು ಜಾನಕಿ ಅವರ ಎರಡು ಗೀತೆಗಳನ್ನು ಹಾಡಿ, ತಮ್ಮ ಸಂಗೀತ ಯಾನದಲ್ಲಿ ಜಾನಕಿಯವರು ಬಹುದೊಡ್ಡ ಸ್ಫೂರ್ತಿಯಾಗಿದ್ದರು ಎಂದು ತಿಳಿಸಿದರು.
ಎಸ್. ಜಾನಕಿಯವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವಾಗ ಎಲ್ಲರ ಕಣ್ಣಂಚಿನಲ್ಲಿ ನೀರಾಡಲು ಕಾರಣವಾಯಿತು.